Belagavi

೩೬ ದಿನಗಳ ಬಳಿಕ ಎಂ.ಇ.ಎಸ್ ಯುವ ನಾಯಕ ಶುಭಂ ಶೇಳಕೆ ಜಾಮೀನಿನ ಮೇಲೆ ಬಿಡುಗಡೆ

Share

ಅಟ್ರಾಸಿಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಎಂ.ಇ.ಎಸ್. ಯುವ ನಾಯಕ ಶುಭಂ ಶೇಳಕೆ ಕೊನೆಗೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆ ಹೊಸ ಹೇಳಿಕೆಯೊಂದನ್ನ ನೀಡಿದ್ದಾರೆ.

ಅಟ್ರಾಸಿಟಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಎಂ.ಇ.ಎಸ್. ಯುವ ನಾಯಕ ಶುಭಂ ಶೇಳಕೆ ಬರೋಬ್ಬರಿ ೩೬ ದಿನಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಪ್ರತಿಕ್ರಿಯಿಸಿರುವ ಅವರು, ಈ ಪ್ರಕರಣದಲ್ಲಿ ತಾವು ಹಾಗೂ ಮನೋಹರ ಹುಂದ್ರೇ ಕಳೆದ ೩೬ ದಿನಗಳನ್ನು ಕತ್ತಲ ಕೋಣೆಯಲ್ಲಿ ಕಳೆದಿರುವುದಾಗಿ ಹೇಳಿದ್ದಾರೆ.

Tags:

error: Content is protected !!