bagalkot

ಡಿಸೆಂಬರ್ 1ರಂದು ಬಾಗಲಕೋಟೆಗೆ ಸಿಎಂ, ಡಿಸಿಎಂ ಭೇಟಿ

Share

ಬಾಗಲಕೋಟೆ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಡಿಸೆಂಬರ್ 1 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸುಮಾರು 676 ಕೋಟಿ ರೂಪಾಯಿ ವೆಚ್ಚದ ಎರಡು ಬೃಹತ್ ಏತ ನೀರಾವರಿ ಯೋಜನೆಗಳಿಗೆ ಅಂದು ಶಂಕುಸ್ಥಾಪನೆ ನೆರವೇರಲಿದೆ.

ಡಿಸೆಂಬರ್ 1 ರಂದು ಬಾಗಲಕೋಟೆ ಜಿಲ್ಲೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಲಿದ್ದು, ಹೂಲಗೇರಿ ಬಳಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಸುಮಾರು 676 ಕೋಟಿ ರೂಪಾಯಿ ವೆಚ್ಚದ ಎರಡು ಮಹತ್ವದ ಏತ ನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರಲ್ಲಿ 411 ಕೋಟಿ ರೂಪಾಯಿ ಮೊತ್ತದ ಅನವಾಲ ಏತ ನೀರಾವರಿ ಯೋಜನೆ ಹಾಗೂ 265 ಕೋಟಿ ರೂಪಾಯಿ ವೆಚ್ಚದ ಕಾಡರಕೊಪ್ಪ ಏತ ನೀರಾವರಿ ಯೋಜನೆಗಳು ಸೇರಿವೆ. ಹಿಡಕಲ್ ಜಲಾಶಯದಿಂದ ಅಂದಾಜು ಮೂರೂವರೆ ಟಿಎಂಸಿಗೂ ಅಧಿಕ ನೀರನ್ನು ಈ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದ್ದು, ಇದರಿಂದ ಬಾಗಲಕೋಟೆ, ಬಾದಾಮಿ ಹಾಗೂ ಬೀಳಗಿ ತಾಲ್ಲೂಕಿನ ಒಟ್ಟು 40 ಗ್ರಾಮಗಳ ಸುಮಾರು 24 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.

Tags:

error: Content is protected !!