ಮಕ್ಕಳು ಮಾನವ ಲೋಕದ ಸುಂದರ ಪುಷ್ಪಗಳಾಗಿದ್ದು, ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಮಕ್ಕಳ ಸ್ನೇಹಿ ವಾತಾವರಣವನ್ನು ನಾಡಿನ ನಾಳಿನ ಭವಿಷ್ಯದ ಆಶಾಕಿರಣಗಳಾಗಿರುವ ಮಕ್ಕಳಿಗೆ ರೂಪಿಸಿ ಕೊಡಬೇಕಾದ ಜವಾಬ್ದಾರಿ ಪಾಲಕರು ಮತ್ತು ನಾಗರಿಕ ಸಮಾಜದ ಮೇಲಿದೆ ಎಂದು ಕುಮಾರಿ ಗೌರಮ್ಮ ಸಂಗಮೇಶ ಬಬಲೇಶ್ವರ ಹೇಳಿದರು. ಇಂದು ಅವರು ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ” ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯ ದಲ್ಲಿ” ನಡೆದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಕೊಡುಗೆಗಳನ್ನು ಸ್ಮರಿಸಿದ ಅವರು, ನೆಹರು ಜಿ ಅವರ ಮಕ್ಕಳ ಮೇಲಿನ ಮಮತೆಯನ್ನು ಸ್ಮರಿಸಿ ತಮ್ಮ ಜನ್ಮದಿನವನ್ನೇ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದ ಅವರ ಮಕ್ಕಳ ಮೇಲಿನ ಪ್ರೀತಿ ಅನನ್ಯವಾದದ್ದು,ಅವರ ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಲಿ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀಮತಿ ಶ್ವೇತಾ ಬಿರಾದಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜಕುಮಾರ ತಿಡುಗುಂದಿ ಆಗಮಿಸಿದ್ದರು. ಸಮಾರಂಭದಲ್ಲಿ ಐಶ್ವರ್ಯ ಜಂಬಗಿ, ಅಶ್ವಿನಿ ಬಡಿಗೇರ್ ಶಶಿಧರ್ ತೇಲಿ, ದೀಪಾ ಬರಗನಿ, ಸುಮಯ್ಯ್ ಕಾಲಿಫಾ, ಸನಾಜುಮ್ ಪಟೇಲ್, ಅಮೃತಾ ಪತ್ತಾರ್, ಶಿವಾನಂದ್ ಗಿರಡೆ ಹಾಗೂ ಕಾಲೇಜಿನ ಸಮಸ್ತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

