Belagavi

ಬೆಳಗಾವಿಯ ಸದಾಶಿವನಗರದಲ್ಲಿ 10 ದಿನಗಳಿಂದ ನೀರಿಗಾಗಿ ಹಾಹಾಕಾರ: ಎಲ್ & ಟಿ ಕಚೇರಿಗೆ ಮುತ್ತಿಗೆ ಹಾಕಿದ ನಿವಾಸಿಗಳು!

Share

ಬೆಳಗಾವಿಯ ಸದಾಶಿವನಗರದಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದ್ದು, ಜನರು ಹನಿ ನೀರಿಗೂ ಪರದಾಡುವಂತಾಗಿದೆ. ನೀರು ಪೂರೈಕೆಯಲ್ಲಿನ ಅವ್ಯವಸ್ಥೆ ಖಂಡಿಸಿ ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಇಂದು ಎಲ್ & ಟಿ ಕಚೇರಿ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಬೆಳಗಾವಿಯ ಸದಾಶಿವನಗರದಲ್ಲಿ ಕಳೆದ 10 ದಿನಗಳಿಂದ ಕುಡಿಯುವ ನೀರು ಸರಬರಾಜು ಆಗದ ಕಾರಣ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಇಂದು ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಚೌಗುಲೆ ನೇತೃತ್ವದಲ್ಲಿ ಸ್ಥಳೀಯರು ಎಲ್ & ಟಿ ಕಚೇರಿ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ನೀರು ಸರಬರಾಜಿನಲ್ಲಿನ ಅಕ್ರಮಗಳ ಕುರಿತು ಶಾಸಕ ಆಸೀಫ್ ಸೇಠ್ ಅವರಿಗೆ ಮಾಹಿತಿ ನೀಡಿದ ಬೆನ್ನಲ್ಲೇ, ಶಾಸಕರು ಪ್ರಸಾದ್ ಚೌಗುಲೆ ಅವರನ್ನು ಸಂಪರ್ಕಿಸಿ, ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಪುನಃಸ್ಥಾಪಿಸುವುದಾಗಿ ಎಲ್ & ಟಿ ಅಧಿಕಾರಿ ಕೇತನ್ ಖಾಂಡೇಕರ್ ಭರವಸೆ ನೀಡಿರುವುದಾಗಿ ತಿಳಿಸಿದರು; ಈ ವೇಳೆ ಜಮಿಲ್ ದೇಸಾಯಿ, ವಿನೋದ್ ಬಾಷ್ಘೋಡ್, ಗಣಪತಿ ಕರ್ಕಿ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

Tags:

error: Content is protected !!