ಉಗಾರದ ಕನ್ನಡ ಯುವಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ 25ನೇ ವರ್ಷದ ಭಾಷಣ ಸ್ಪರ್ಧೆಗಳು ನೆರವೇರಿದವು.

ಕಾಗವಾಡ ತಾಲೂಕಿನ ಉಗಾರ್ ಖುರ್ದ್ನ ಶ್ರೀ ಹರಿ ವಿದ್ಯಾಲಯದಲ್ಲಿ ಕನ್ನಡ ಯುವಕ ಸಂಘದ ವತಿಯಿಂದ ನಿರಂತರ 25 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ಭಾಷೆ ಉಳಿಸಿ ಬೆಳೆಸಲು ಭಾಷಣ ಸ್ಪರ್ಧೆ ಹಮ್ಮಿಕೊಳ್ಳುತ್ತಾರೆ. ಇದು ಒಂದು ಹೆಮ್ಮೆಯ ವಿಷಯ. ಗಡಿಭಾಗದಲ್ಲಿ ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯುವಕ ಸಂಘದ ಅಧ್ಯಕ್ಷ ಡಾಕ್ಟರ್ ಶಿವಗೌಡ ಕಾಗೆ ಇವರ ಸೇವೆ ಬೇರೆ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹೇಳಿದರು.ಬೈಟ್
ಕನ್ನಡ ಯುವಕ ಸಂಘದ ಅಧ್ಯಕ್ಷ ಡಾಕ್ಟರ್ ಶಿವಗೌಡ ಕಾಗೆ ಮಾತನಾಡಿ, ಉಗಾರದ ಶ್ರೀಹರಿ ವಿದ್ಯಾಲಯ ಕನ್ನಡ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಯ ತ್ರಿವೇಣಿ ಸಂಗಮ. ಇಲ್ಲಿಗೆ ಎಲ್ಲ ಭಾಷೆಯ ವಿದ್ಯಾರ್ಥಿಗಳಿಗೆ ಒಳ್ಳೆಯ ಜ್ಞಾನ ನೀಡುತ್ತಾರೆ. ಕಳೆದ 25 ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತವಾಗಿ ಕನ್ನಡ ಭಾಷಣ ಸ್ಪರ್ಧೆಗಳು ಹಮ್ಮಿಕೊಳ್ಳುತ್ತೇವೆ. ಇಲ್ಲಿಗೆ ಕನ್ನಡ ಉಳಿಸಿ ಬೆಳೆಸಲು ನಿರಂತರ ಪ್ರಯತ್ನಿಸುತ್ತೇವೆ. ಸಕ್ಕರೆ ಉದ್ಯಮಿ ದಿವಂಗತ ರಾಜಾಭಾವು ಶಿರಗಾಂವ್ಕರ್ ಇವರ ಜನುಮದಿನದಂದು ಇಂಗ್ಲೀಷ್ ಭಾಷೆಯಲ್ಲಿ ಸ್ಪರ್ಧೆಗಳು ಏರ್ಪಡಿಸಲಿ ಎಂದರು.ಬೈಟ್
ಶ್ರೀಹರಿ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂತರ ಶಾಲಾ ಭಾಷಣ ಸ್ಪರ್ಧೆ ಹಮ್ಮಿಕೊಂಡಿದ್ದರು. ಬೆಳಗಾವಿ ಜಿಲ್ಲೆಯಿಂದ 36 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.
ವಿದ್ಯಾರ್ಥಿಗಳಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್, ಮಳೆ ಕೊರತೆಯ ಪರಿಣಾಮಗಳು, ತ್ಯಾಜ್ಯ ವಸ್ತು ನಿರ್ವಹಣೆ ಈ ವಿಷಯಗಳಲ್ಲಿ ಭಾಷಣ ಸ್ಪರ್ಧೆಗಳು ಏರ್ಪಟ್ಟವು.
ಸ್ಪರ್ಧೆಯಲ್ಲಿ ಐನಾಪುರದ ಕೆ ಆರ್ ಎಸ್ ಶಿಕ್ಷಣ ಸಂಸ್ಥೆಯ ಕುಮಾರಿ ವಷೆಣಿ ಕಾಗಲಿ ಪ್ರಥಮ ಸ್ಥಾನ ಪಡೆದುಕೊಂಡರು, ದ್ವಿತೀಯ ಸ್ಥಾನ ಕುಮಾರಿ ಅಕ್ಷೋಭ್ಯ ಹರೀಶ್ ಜಾಹಗಿರದಾರ, ಮಂಗಸೂಳಿಯ ಶ್ರೀ ಗುರು ವಿದ್ಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ತೃತೀಯ ಸ್ಥಾನ ಕುಮಾರಿ ದೇವಿಶ್ರೀ ಬಾಹುಬಲಿ ನಾಗಣ್ಣವರ್ ಉಗಾರ ಬಿ ಕೆ ಗ್ರಾಮದ ಪಾಸಗೌಡ ಪ್ರೌಢಶಾಲೆ ವಿದ್ಯಾರ್ಥಿ ಯಶಸ್ವಿಯಾದರು.
ಇವರಿಗೆ ಸ್ವಾಮೀಜಿಗಳ ಹಸ್ತದಿಂದ ಬಹುಮಾನ ನೀಡಲಾಯಿತು.
ಸಮಾರಂಭದ ದಿವ್ಯ ಸಾನಿಧ್ಯ ಡಾಕ್ಟರ್ ಶ್ರದ್ಧಾನಂದ ಸ್ವಾಮೀಜಿ ಹಾಗೂ ತಿಕೋಟಾದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದರು.
ಜೊತೆಗೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಬೆಳ್ಳಂಕಿ, ಮುಖ್ಯೋಪಾಧ್ಯಾಯ ಎಸ್ ಎಸ್ ಮೂಟಗಿ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡ ಭಾಷಣ ಸ್ಪರ್ಧೆಗಾಗಿ ಅನೇಕ ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸುಕುಮಾರ್ ಬನ್ನುರೆ,
ಇನ್ನ ನ್ಯೂಸ್ ಕಾಗವಾಡ
