Khanapur

ಪುಲೆವಾಡಿಯ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಕಳಸಾರೋಹಣ: ಶಾಸಕ ವಿಠ್ಠಲ ಹಲಗೇಕರ ಭಾಗಿ; 25 ಸಾವಿರ ರೂ. ದೇಣಿಗೆ ಘೋಷಣೆ!

Share

ಖಾನಾಪುರ ತಾಲೂಕಿನ ಗ್ರಾಮೀಣ ಭಾಗವಾದ ಪುಲೆವಾಡಿ ಗ್ರಾಮದಲ್ಲಿ ಶ್ರೀ ವಿಠ್ಠಲ-ರುಕ್ಮಾಯಿ ದೇವಸ್ಥಾನದ ಕಳಸ ಜೀರ್ಣೋದ್ಧಾರ ಹಾಗೂ ಸ್ಲ್ಯಾಬ್ ಭರಣಿ ಕಾರ್ಯಕ್ರಮವು ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರಿತು. .

ಪುಲೆವಾಡಿ ಗ್ರಾಮದೇವರಾದ ಶ್ರೀ ವಿಠ್ಠಲ-ರುಕ್ಮಾಯಿ ದೇವಸ್ಥಾನದ ಕಳಸ ಜೀರ್ಣೋದ್ಧಾರ ಸಮಾರಂಭದಲ್ಲಿ ಮಾತನಾಡಿದ ಶಾಸಕ ವಿಠ್ಠಲ ಹಲಗೇಕರ, ಗ್ರಾಮಸ್ಥರೆಲ್ಲರೂ ಒಂದಾಗಿ ಕೈಗೊಂಡಿರುವ ಈ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಇದೇ ವೇಳೆ ದೇವಸ್ಥಾನದ ಪುನರ್ನಿರ್ಮಾಣಕ್ಕೆ ತಮ್ಮ ವೈಯಕ್ತಿಕ ಮಂಡಲದಿಂದ 25,000 ರೂಪಾಯಿಗಳ ಧನಸಹಾಯವನ್ನು ಘೋಷಿಸಿದ ಶಾಸಕರು, ಮುಂದೆಯೂ ಜೀರ್ಣೋದ್ಧಾರ ಕಾರ್ಯಗಳಿಗೆ ಅಗತ್ಯವಿರುವ ಹೆಚ್ಚಿನ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಪಂಚ ಕಮಿಟಿಯ ಪದಾಧಿಕಾರಿಗಳು, ಪ್ರಮುಖ ನಾಯಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

– ಅಲ್ತಾಫ್ ಎಂ. ಬಸರೀಕಟ್ಟಿ, ಇನ್ ನ್ಯೂಸ್, ಖಾನಾಪುರ.

Tags:

error: Content is protected !!