ಖಾನಾಪೂರ ತಾಲೂಕಿನ ನಂದಗಡ ಸಮೀಪದ ಹೊನ್ನಮ್ಮ ದೇವಿಯ ಕೆರೆ ಪಕ್ಕದ ವಾತಾವರಣದಲ್ಲಿ ನವಿಲಿನ ಮನಮೋಹಕ ನೃತ್ಯದ ದರ್ಶನ್ ಭಾಗ್ಯ ಕಾಣಲು ದೊರೆಯುತ್ತಿದೆ ಖಾನಾಪೂರ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಬಾಬು ಹತ್ತರವಾಡ ಅವರು ಈ ನವಿಲಿನ ನರ್ತನವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ನಮ್ಮ ಇನ್ ನ್ಯೂಸ್ ಚಾನಲ್ ಗೆ ಕಳುಹಿಸಿದ್ದಾರೆ ಪರಿಸರ ಮಡಿಲಲ್ಲಿ ಖಾನಾಪೂರ ತಾಲೂಕಾ ಪ್ರಸರಿಸಿದ್ದು ಪರಿಸರ ಪ್ರೇಮಿಗಳಿಗೆ ಇಂತಹ ನೋಟಗಳು ಹೊಸ ಹುಮ್ಮಸ್ಸು ನೀಡುತ್ತದೆ ಖಾನಾಪೂರ -ಹಳಿಯಾಳ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಹೊನ್ನಮ್ಮನ ದೇವಸ್ಥಾನ ಇದ್ದು ಇದರ ಪಕ್ಕದಲ್ಲೇ ಕೆರೆ ಇದೆ ಇದರ ಅಕ್ಕಪಕ್ಕದಲ್ಲಿ ಸುಂದರವಾದ ಪರಿಸರ ಸ್ನೇಹಿ ವಾತಾವರಣ ಇದ್ದು ಈ ನವಿಲಿನ ನರ್ತನ ಕಾಣಲು ದೊರೆಯಿತು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
