Hukkeri

ಹುಕ್ಕೇರಿ : ಈ ಬಾರಿ ರೈತರಿಗೆ ಮೀಸಲಾದ ದಸರಾ ಉತ್ಸವ – ಚಂದ್ರಶೇಖರ ಮಹಾಸ್ವಾಮಿಗಳು.

Share

ಈ ಬಾರಿ ದಸರಾ ಉತ್ಸವವನ್ನು ರೈತರಿಗಾಗಿಯೇ ಮೀಸಲಾಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.
ಹುಕ್ಕೇರಿ ನಗರದಲ್ಲಿ ಕಳೆದ ಹತ್ತು ದಿನಗಳಿಂದ ಹಿರೇಮಠದ ದಸರಾ ಉತ್ಸವದಲ್ಲಿ ಗುಡ್ಡಾಪೂರ ದಾನಮ್ಮಾ ದೇವಿ ಪುರಾಣ ಪ್ರವಚನ, ಚಂಡಿಕಾ ಹೋಮ, ಗುರುಶಾಂತೇಶ್ವರ ರಥೋತ್ಸವ ಹಾಗೂ ದೇವಿ ಪಲ್ಲಕ್ಕಿ ಉತ್ಸವ ,ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿಶಾಂತ ಶಾಸ್ತ್ರಿ ಮತ್ತು ಸಂಪತ್ತ ಕುಮಾರ ಶಾಸ್ತ್ರಿಗಳ ನೇತೃತ್ವದಲ್ಲಿ ಜರುಗಿದವು.

ಪ್ರತಿ ದಿನದ ಸಾಯಂಕಾಲದ ಕಾರ್ಯಕ್ರಮಗಳಲ್ಲಿ ಶಾಸಕರಾದ ನಿಖಿಲ್ ಕತ್ತಿ, ದುರ್ಯೋಧನ ಐಹೋಳೆ, ಮಾಜಿ ಸಂಸದ ರಾದ ರಮೇಶ ಕತ್ತಿ, ಅಣ್ಣಾಸಾಹೇಬ ಜೋಲ್ಲೆ, ಅಪೇಕ್ಸ ಬ್ಯಾಂಕ್ ನಿರ್ದೆಶಕ ರಾಹುಲ್ ಜಾರಕಿಹೋಳಿ ಸೇರಿದಂತೆ ಸಾಹಿತಿಗಳು,ರಾಜಕಾರಣಿಗಳು , ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಮಹಾನ್ ವ್ಯಕ್ತಿಗಳ ಸಮ್ಮುಖದಲ್ಲಿ ದಸರಾ ಉತ್ಸವಗಳು ಜರುಗಿದವು.

ಪ್ರತಿ ದಿನ ನಗರದ ಕಾರಂಜಿಯಲ್ಲಿ ಗಂಗಾರತಿ ಮಾಡುವ ಮೂಲಕ ದೇವಿಗೆ ವಿಷೇಶ ಪೂಜಾ ಕೈಂಕರ್ಯಗಳು ಜರುಗಿದವು.
ದಸರಾ ಕೊನೆಯ ದಿನ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಶ್ರೀ ಮಠದಿಂದ ನಗರದ ಹೋರವಲಯದ ಬನ್ನಿ ಮಂಟಪಕ್ಕೆ ತೇರಳಿ ಶಮಿ ಮರಕ್ಕೆ ಹೋಮ ಯಜ್ಞ ಯಾಗಾದಿ ಜರುಗಿಸಿ ಪೂಜೆ ಸಲ್ಲಿಸಿದರು.

ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ ಮಹಾಸ್ವಾಮಿಗಳು ಈ ಬಾರಿ ದಸರಾ ಉತ್ಸವವನ್ನು ರೈತರಿಗಾಗಿ ಮಿಸಿಲಿಡಲಾಗಿದೆ, ರೈತ ರಾಷ್ಟಕ್ಕೆ ಅನ್ನ ಹಾಕುವ ಶ್ರಮ ಜೀವಿ ಅವರು ತಮ್ಮ ಹಕ್ಕಿಗಾಗಿ ರಸ್ತೆ ಮೇಲೆ ಕುಳಿತು ಪ್ರತಿಭಟನೆ ಮಾಡುವದು ಸಮಂಜಸವಲ್ಲ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಹಿತ ಕಾಪಾಡಲು ಮುಂದೆ ಬರಬೇಕು ಇದು ನಮ್ಮ ಆಜ್ಞೆ ಯಾಗಿದೆ ಹಾಗೂ ಹುಕ್ಕೇರಿ ಹಿರೇಮಠ ಭಾವೈಕ್ಯ ದಿಂದ ಕೂಡಿದೆ ಕಾರಣ ನಿಮ್ಮ ಮನೆ ದೇವರನ್ನು ,ದೈವವನ್ನು, ಮನೆಯ ಹಿರಿಯರನ್ನು , ಮಹಿಳೆಯರನ್ನು ಊರಿನ ಪರಂಪರೆಯನ್ನು ಗೌರವಿಸಿದರೆ ಮಾತ್ರ ಶಾಂತಿ ಲಭಿಸುವದು ಎಂದರು

ನಂತರ ಮಾತನಾಡಿದ ಕೃಷಿ ಮಹಾವಿದ್ಯಾಲ ಪ್ರಾಚಾರ್ಯ ಸುನಿಲಕುಮಾರ ನೂಲಿ ಬರುವ ವರ್ಷ ಹುಕ್ಕೇರಿ ಹಿರೇಮಠದ ದಸರಾ ಉತ್ಸವವನ್ನು ಕೃಷಿ ಇಲಾಖೆ ಆವರಣದಲ್ಲಿ ನೂತನ ಬನ್ನಿ ಮಂಟಪ ನಿರ್ಮಿಸಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ವಿಶಿಷ್ಟ ವಾಗಿ ಆಚರಿಸಲಾಗುವದು ಎಂದರು
ಅಡ್ಡಪಲ್ಲಕ್ಕಿ ಯಲ್ಲಿ ವೀರಾಜಮಾನವಾಗಿ ಕುಳಿತ ಶ್ರೀಗಳನ್ನು ಹಕ್ಕುದಾರರು, ಆಸ್ತಾನ ಸೇವಕರು ಮಠದ ಸಾವಿರಾರು ಭಕ್ತರು ವಾದ್ಯ ಮೇಳಗಳೊಂದಿಗೆ ಕುದುರೆ ಸಾರೋಟಗಳಲ್ಲಿ ಆಗಮಿಸಿದ ಭಕ್ತ ಸಮೂಹ ಶಮೋಲ್ಲಂಗನೆ ಮಾಡುವ ಮೂಲಕ ಒಂಬತ್ತು ದಿನಗಳ ದಸರಾ ಉತ್ಸವಕ್ಕೆ ತೇರೆ ಎಳೆಯಲಾಯಿತು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!