Hukkeri

ಹುಕ್ಕೇರಿ : ಅಧಿಕಾರಿಗಳು ಸಾರ್ವಜನಿಕರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ – ತಹಸಿಲ್ದಾರ ಬಲರಾಮ ಕಟ್ಟಿಮನಿ.

Share

ಹುಕ್ಕೇರಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕು ಎಂದು ಹುಕ್ಕೇರಿ ತಾಲೂಕಾ ದಂಡಾಧಿಕಾರಿ ಬಲರಾಮ ಕಟ್ಟಿಮನಿ ಹೇಳಿದರು.
ನವೆಂಬರ್ 1 ರಂದು ಹುಕ್ಕೇರಿ ತಾಲೂಕಾ ಆಡಳಿತ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ರೂಪ ರೇಷೆ ತಯಾರಿಗಾಗಿ ಪೂರ್ವ ಭಾವಿ ಸಭೆ ಜರುಗಿತು.


ತಹಸಿಲ್ದಾರ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ನ್ಯಾಯವಾದಿ ಪ್ರದೀಪ ರಿಜಕನ್ನವರ ಮಾತಮಾಡಿ ಈ ಬಾರಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಕನ್ನಡಪರ ಸಂಘಟನೆಗಳು ಕೈ ಜೋಡಿಸಬೇಕು ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರವನ್ನು ಕನ್ನಡ ಬಾವುಟಗಳಿಂದ ಕಂಗೋಳಿಸ ಬೇಕು ಹಾಗೂ ರೂಪಕಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಲಘು ಆಹಾರದ ವ್ಯವಸ್ಥೆ ಯಾಗ ಬೇಕು ಎಂದು ಹೇಳಿದರು


ಸಭೆಯಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಬಿ ಇ ಓ ಪ್ರತಿಬಾ ಪಾಟೀಲ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ಅದ್ಯಕ್ಷ ಪ್ರಕಾಶ ಅವಲಕ್ಕಿ, ಮಾಜಿ ಪುರಸಭೆ ಅದ್ಯಕ್ಷ ಉದಯ ಹುಕ್ಕೇರಿ ಮಾತನಾಡಿ ವಿವಿಧ ಇಲಾಖೆ ಮತ್ತು ಶಾಲಾ ವಿದ್ಯಾರ್ಥಿಗಳಿಂದ ರೂಪಕಗಳು, ಭುವನೇಶ್ವರಿ ದೇವಿ ಭಾವ ಚಿತ್ರ ಮೆರವಣಿಗೆ ಹಾಗೂ ಸತ್ಕಾರ ಮತ್ತು ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಕುರಿತು ಚರ್ಚೆಗಳಾದವು.

ತಹಸಿಲ್ದಾರ ಬಲರಾಮ ಕಟ್ಟೀಮನಿ ಮಾತನಾಡಿ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಹಾಗೂ ಸಾರ್ವಜನಿಕರು ಸಹ ಉತ್ಸಾಹದಿಂದ ಭಾಗವಹಿಸಿ ಕನ್ನಡದ ಹಿರಿಮೆಯನ್ನು ಹೆಚ್ಚಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮೋದ ಕೂಗೆ, ರಾಬೀನ್ ಕೌಜಲಗಿ, ಶಾಂತಿನಾಥ ಮಗದುಮ್ಮ, ಬಸವರಾಜ ಮಾಂದೂಡಕರ, ಅನಿತಾ ತೋಟಗಿ ಸೇರಿದಂತೆ ವಿವಿಧ ಶಾಲಾ ಮುಖ್ಯೋಪಾಧ್ಯಾಯರು, ಅಧಿಕಾರಿಗಳು ಕನ್ನಡ ಪರ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!