Hukkeri

ಹುಕ್ಕೇರಿ : ಯುವಕರಲ್ಲಿ ನಾಯಕತ್ವ ಗುಣ ಅಳವಡಿಸುವದು ಸರ್ಕಾರದ ಧ್ಯೇಯ – ಗುರುಶಾಂತ ಪಾವಟೆ

Share

ಮಕ್ಕಳಲ್ಲಿ ಮತ್ತು ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವದು ಸರ್ಕಾರದ ಧ್ಯೇಯ ವಾಗಿದೆ ಎಂದು ಹುಕ್ಕೇರಿ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಗುರುಶಾಂತ ಪಾವಟೆ ಹೇಳಿದರು.

ಹುಕ್ಕೇರಿ ತಾಲೂಕಾ ಆಡಳಿತ,ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡ ಶಾಲಾ ಸಂಸತ್ತು ಅಣುಕ ಪ್ರದರ್ಶನವನ್ನು ತಾಲೂಕಾ ದಂಡಾಧಿಕಾರಿ ಬಲರಾಮ ಕಟ್ಟಿಮನಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ವೇದಿಕೆ ಮೇಲೆ ತಾಲೂಕಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಬೆಳಗಾವಿ ಜಿಲ್ಲಾ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ದೌರ್ಜನ್ಯ ಸಮಿತಿ ಸದಸ್ಯ ಕರೆಪ್ಪ ಗುಡನ್ನವರ,ವಿಭಾಗಿಯ ಸದಸ್ಯ ರಮೇಶ ಹುಂಜಿ, ಕೃಷಿ ಅಧಿಕಾರಿ ಶ್ರೀಮತಿ ವಂದನಾ ಹಿರೇಮಠ, ಎ ಎಸ್ ಪದ್ಮನವರ,ಡಿ ಕೆ ಅವರಗೋಳ ,ಡಾ, ರಾಜು ಮೇತ್ರಿ ಉಪಸ್ಥಿತರಿದ್ದರು.
ಮಾದ್ಯಮಗಳೊಂದಿಗೆ ಮಾತನಾಡಿದ ಗುರುಶಾಂತ ಪಾವಟೆ ಶಾಲಾ ಮಕ್ಕಳಲ್ಲಿ ಮತ್ತು ಯುವಕರಲ್ಲಿ ನಾಯಕತ್ವ ಗುಣ ಬೇಳೆಸುವ ಉದ್ದೇಶದಿಂದ ರಾಜ್ಯ ಸರ್ಕಾರ ಶಾಲಾ ಸಂಸತ್ತು ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂದು ವಿವಿಧ ಇಲಾಖೆಗಳ ಸಹಕಾರದಿಂದ ಮಕ್ಕಳಿಂದ ಸಂಸತ್ತಿನ ಕಾರ್ಯ ಕಲಾಪಗಳ ಅಣುಕು ಪ್ರದರ್ಶನ ಹಮ್ಮಿಕೊಳ್ಳುಲಾಗಿದೆ ಎಂದರು

ನಂತರ ಮಕ್ಕಳಿಂದ ಸಂಸತ್ತಿನಲ್ಲಿ ಜರಗುವ ಕಾರ್ಯ ಕಲಾಪಗಳ ಪದರ್ಶನ ಜರುಗಿತು.
ತಹಸಿಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿ ಪ್ರಜಾಪ್ರಭುತ್ವ ಕುರಿತು ವಿಧಾನಸಭೆ ಮತ್ತು ವಿಧಾನ ಪರಿಷತ್ತು ಗಳಲ್ಲಿ ಚರ್ಚಿಸುವ ವಿಷಯಗಳ ಕುರಿತು ಮಕ್ಕಳನ್ನು ಮತ್ತು ಯುವಕರನ್ನು ಜಾಗೃತ ಗೋಳಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದರು

ಈ ಸಂದರ್ಭದಲ್ಲಿ BRC ನಾಗಿನಿ ಕೆ ಎಲ್, ECO ಬೀರಾದಾರ ಪಾಟೀಲ, ಸುಭಾಷ ಗಸ್ತಿ, ಸಮಾಜ ಕಲ್ಯಾಣ ಅಧಿಕಾರಿಗಳಾದ ಆರ್ ಬಿ ಮಾಲದಾರ, ಎಸ್ ಎಂ ಶೇಟ್ಟೆನವರ, ಶ್ರೀಧರ ನಡುವಿನಮನಿ, ಎಸ್ ವಿ ಪೂಜೇರಿ, ಶ್ರೀಮತಿ ಹೋಳೆಯಾಚೆ, ಕೋಟಬಾಗಿ, ಇಂಗಳೆ, ಆರ್ ಬಿ ಪಾಟೀಲ ಮತ್ತು ವಿವಿಧ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Tags:

error: Content is protected !!