ಆರೋಗ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ಪ್ರತಿವರ್ಷ ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಎಕ್ಸಲೆಂಟ್ ನರ್ಸಿಂಗ್ ಕಾಲೇಜಿನ ಕೊಡುಗೆ ಅನನ್ಯವಾದದ್ದು. ಯುವ ನಾಯಕರಾದ ಸಂಗಮೇಶ್ ಬಬಲೇಶ್ವರ ಅವರು ತಮ್ಮ ತಾಯಿಯ ಸ್ಮರಣೆಗಾಗಿ ಸ್ಥಾಪಿಸಿರುವ ಕಾಲೇಜಿನಿಂದ ತಾಯಿ ಹೃದಯದ ನರ್ಸಗಳು ಪ್ರತಿ ವರ್ಷ ಹೊರ ಬರುವಂತಾಗಲಿ ಎಂದು ಹಾರೈಸಿದರು. ನಗರದಲ್ಲಿ ನಡೆದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ್ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ” ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ” ಮಹಾವಿದ್ಯಾಲಯದ ನಾಲ್ಕನೇ ಬ್ಯಾಚಿನ ವಿದ್ಯಾರ್ಥಿಗಳ ದೀಪದಾನ ಹಾಗೂ ಪ್ರತಿ ಜ್ಞಾವಿಧಿ ಬೋಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಸಂಗಮೇಶ ಬಬಲೇಶ್ವರ ಮಾತನಾಡಿ” ದೇವರು ಎಲ್ಲ ಕಡೆ ತಾಯಿಯ ಜೊತೆಗೆ ಇನ್ನೊಬ್ಬ ತಾಯಿಯ ಸ್ಥಾನದಲ್ಲಿ ವೈದ್ಯರು ಮತ್ತು ನರ್ಸುಗಳನ್ನು ಸೃಷ್ಟಿಮಾಡಿದ್ದಾನೆ ಹಾಗಾಗಿ ನೀವೆಲ್ಲರೂ ರೋಗಿಗಳಲ್ಲಿ ನಿಮ್ಮ ತಂದೆ ತಾಯಿಯನ್ನು ಕಂಡು ಪ್ರಾಮಾಣಿಕ ಸೇವೆ ಮಾಡಿದರೆ ನಮ್ಮ ತಾಯಿಯ ಸ್ಮರಣೆಗಾಗಿ ನಾವು ನರ್ಸಿಂಗ್ ಮಹಾವಿದ್ಯಾಲಯ ಪ್ರಾರಂಭ ಮಾಡಿದ್ದು ಸಾರ್ಥಕವಾಗುತ್ತದೆ ಎಂದು ಹೇಳಿದರು”. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನನಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಹಂಪನಗೌಡ ಪಾಟೀಲ್ ಮಾತನಾಡಿ” ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿತ್ತು ಎಲ್ಲ ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಸೇವೆ ಸಲ್ಲಿಸಿದರೆ ಅದಕ್ಕಿಂತ ಶ್ರೇಷ್ಠವಾದ ಕೆಲಸ ಮತ್ತೊಂದಿಲ್ಲ ಎಂದರು “. ಇನ್ನೊರ್ವ್ ಅತಿಥಿಗಳಾದ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಹನುಮಂತಪ್ಪ ಹತ್ತರಿಕಿಹಾಳ ಮಾತನಾಡಿ ” ವಿದ್ಯಾರ್ಥಿಗಳು ವೃತ್ತಿಯಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಎಕ್ಸಲೆಂಟ್ ನರ್ಸಿಂಗ್ ಕಾಲೇಜು ಜಿಲ್ಲಾ ಆಸ್ಪತ್ರೆಯೊಂದಿಗೆ ಸಂಯೋಜನೆ ಹೊಂದಿರುವುದರಿಂದ ಇಲ್ಲಿ ಓದುತ್ತಿರುವ ನರ್ಸಿಂಗ್ ವಿದ್ಯಾರ್ಥಿಗಳು ಅತ್ಯಂತ ಸುದೈವಿಗಳು ಎಂದು ಹೇಳಿದರು. ಉದ್ಯಮಿ ಶ್ರೀ ಶಾಂತೇಶ ಕಳಸಗೊಂಡ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಶ್ರೀ ಪ್ರದೀಪ್ ಲಿಂಗದಳ್ಳಿ ಪ್ರಾಚಾರ್ಯರಾದ ಶ್ರೀಮತಿ ಶ್ವೇತಾ ಬಿರಾದಾರ್, ಶ್ರೀಮತಿ ಎಸ್ ಎ ಮೋಮಿನ್, ಶ್ರೀಮತಿ ಜಯಶ್ರೀ ಶ್ರೀ ಅಮಿತ್ ಹಾಗೂ ಸಂಯೋಜಕರಾದ ಶ್ರೀ ರಾಜಶೇಖ ತಿಡಗುಂದಿ, ಶ್ರೀ ಶರಣಗೌಡ ಹಾಗೂ ಅಧ್ಯಾಪಕರು, ವಿದ್ಯಾರ್ಥಿಗಳು ಪಾಲಕರು, ಪಾಲ್ಗೊಂಡಿದ್ದರು.
