ಅವರು ನೂರಾರು ಎಕರೆ ಆಸ್ತಿ ಹೊಂದಿರುವ ಪ್ರತಿಷ್ಟಿತ ಮನೆತನದವರು.ಆದರೆ ಅವರ ಎರಡು ಎಕರೆ ಆಸ್ತಿ ವಿವಾದ ಕೊಲೆ ಮಾಡುವ ಮಟ್ಟಿಗೆ ಹೋಗಿದೆ.ಎರಡು ಎಕರೆ ಒತ್ತುವರಿ ಮಾಡಿದ್ದ ಮೈದುನ ಅತ್ತಿಗೆಗೆ ಬೊಲೆರೊ ಹಾಯಿಸಿ ಕೊಲೆ ಯತ್ನ ಮಾಡಿದ್ದಾನೆ.ಇಂತಹ ಘಟನೆ ನಡೆದದ್ದು ಎಲ್ಲಿ ಇಲ್ಲಿದೆ ನೋಡಿ ಸ್ಟೋರಿ..

ಅತ್ತಿಗೆ ಮೇಲೆ ಆಕೆಯ ಮಕ್ಕಳೆದುರೆ ಬೊಲೆರೊ ಹಾಯಿಸಿ ಕೊಲೆ ಯತ್ನ ಮಾಡಿದ ಮೈದುನ.ಅಣ್ಣನ ಮಗಳು ಕಣ್ಣೀರು ಹಾಕಿ ಕಾಕಾ ಬೇಡ ಎಂದು ಕೂಗಿದರೂ ಕೇಳದ ಪಾಪಿ.ಜೀಪ್ ಕೆಳಗೆ ಸಿಲುಕಿ ಅತ್ತಿಗೆಯ ನರಳಾಟ.ಗಂಭೀರ ಗಾಯ ಆಸ್ಪತ್ರೆಗೆ ದಾಖಲಾದ ಮಹಿಳೆ.ಈ ಘಟನೆ ನಡೆದದ್ದು
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ. ಆಸ್ತಿಯಲ್ಲಿ ಎರಡು ಎಕರೆ ಒತ್ತುವರಿ ವಿವಾದ ರಕ್ತಸಿಕ್ತ ಘಟನೆಗೆ ಕಾರಣವಾಗಿದೆ. ಮೈದುನನೇ ಅತ್ತಿಗೆಗೆ ಬೊಲೆರೊ ಹಾಯಿಸಿ ಕೊಲೆ ಯತ್ನ ಮಾಡಿದ್ದು, ಬೊಲೆರೊ ಹಾಯಿಸುವ ಭೀಕರ ದೃಶ್ಯ ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದೆ. ಮಂಗಳಾದೇವಿ ನಾಡಗೌಡ ಎಂಬ ಮಹಿಳೆಗೆ ಬೊಲೆರೊ ಡಿಕ್ಕಿ ಹೊಡೆದು ಕೊಲೆ ಯತ್ನ. ಕೃತ್ಯ ಎಸಗಿದ್ದು ಮೈದುನ ಚೆನ್ನಪ್ಪಗೌಡ ನಾಡಗೌಡ.ಮಂಗಳಾದೇವಿ ಎರಡು ಕಾಲು ಮುರಿದಿವೆ.ಎದೆ ಹೊಟ್ಟೆ ಭಾಗದಲ್ಲಿ ತೀವ್ರ ಒಳಗಾಯವಾಗಿದ್ದು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಂಗಳಾದೇವಿ ಮಗಳು ಪಾಪಿ ಚಿಕ್ಕಪ್ಪನಿಗೆ ಕಠಿಣ ಶಿಕ್ಷೆಯಾಗಬೇಕು.ನಮಗೆ ಜೀವಬೆದರಿಕೆ ಇದೆ ರಕ್ಷಣೆ ಬೇಕು ಎಂದು ಆಗ್ರಹ ಮಾಡ್ತಿದ್ದಾರೆ.

ಮಂಗಳಾದೇವಿ ಹಾಗೂ ಚೆನ್ನಪ್ಪಗೌಡ ಅವರಿಗೆ ತಲಾ ೮೦-೧೦೦ಎಕರೆ ಆಸ್ತಿ ಇವೆ.ಊರಿಗೆ ಪ್ರತಿಷ್ಟಿತ ಮನೆತನ.ಮಾಜಿ ಸಚಿವ ಎಸ್ ಆರ್ ಪಾಟೀಲ್ ಸಂಬಂಧಿಗಳು ಆಗಬೇಕು. ತಮ್ಮ ಜಮೀನಿನ ವ್ಯಾಪ್ತಿ ಎರಡು ಎಕರೆ ಜಮೀನನ್ನು ಚೆನ್ನಪ್ಪಗೌಡ ಕಳೆದ 30-40 ವರ್ಷದಿಂದ ಉಳುಮೆ ಮಾಡುತ್ತಿದ್ದ.ಇತ್ತೀಚೆಗೆ ಮಂಗಳಾದೇವಿ ಸರ್ವೇಯರ್ ಕರೆಸಿ ಆಸ್ತಿ ಅಳತೆ ಮಾಡಿಸಿ, ಒತ್ತುವರಿಯಾಗಿದ್ದ ಎರಡು ಎಕರೆ ಸೇರಿಸಿ ಸೀಮೆ ಕಲ್ಲು ಹಾಕಿ ಬೇಲಿ ಹಾಕಿ ಬಿತ್ತನೆ ಮಾಡಿದ್ದರು.”ನನಗೆ ನೋಟಿಸ್ ನೀಡದೆ, ನಾನು ಇಲ್ಲದೇ ಇದ್ದಾಗ ಸರ್ವೆ ಹೇಗೆ ಮಾಡಿಸಿದ್ದೀರಿ” ಎಂದು ಚೆನ್ನಪ್ಪಗೌಡ ಆಕ್ರೋಶಗೊಂಡಿದ್ದ. ಬಿತ್ತಿದ ಹೊಲವನ್ನೇ ಹರಗಿ ಹಾಕಿ ಬಂದಿದ್ದ.ಇಂದು ಮಂಗಳಾದೇವಿ ಮಕ್ಕಳ ಸಮೇತ ಹೊಲದಲ್ಲಿದ್ದಾಗ ಅಲ್ಲಿಗೆ ಬೊಲೆರೊ ತೆಗೆದುಕೊಂಡು ಹೋಗಿ ಅತ್ತಿಗೆಯ ಮೇಲೆ ಹಾಯಿಸಿದ್ದಾನೆ. ಬೊಲೆರೊ ಅಡಿ ಸಿಲುಕಿ ಮಂಗಳಾದೇವಿ ನರಳಾಡಿದ್ದಾರೆ. ಮಗಳು “ಕಾಕಾ ಹಾಯಿಸಬೇಡ” ಎಂದು ಅಳುತ್ತಾ ಗೋಗರೆಯುವ ದೃಶ್ಯ ಮನ ಕಲುಕುವಂತಿತ್ತು.ಸುದ್ದಿ ತಿಳಿದ ಮಾಜಿ ಸಚಿವ ಎಸ್.ಆರ್. ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.ಸಚಿವ ಶಿವಾನಂದ ಕಾಶಪ್ಪನವರ್ ಕೂಡಾ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅವರ ಜೊತೆ ಬಾಗಲಕೋಟೆ SP ಸಿದ್ದಾರ್ಥ್ ಗೋಯಲ್ ಕೂಡಾ ಭೇಟಿ ನೀಡಿದ್ದಾರೆ.ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಳಕಲ್ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಚಿಕಿತ್ಸೆ ನೀಡುತ್ತಿರುವ ವೈದ್ಯರು ೨೪ ತಾಸು ಕ್ರಿಟಿಕಲ್ ಕಂಡೀಶನ್ ಇದ್ದು ಈಗಲೇ ಏನು ಹೇಳಲು ಆಗೋದಿಲ್ಲ ಅಂತ ಹೇಳಿದ್ದರೆ, ಮತ್ತೊಂದೆಡೆ ಆರೋಪಿಗಾಗಿ ಮೂರು ತಂಡ ಮಾಡಿ ಬಲೆ ಬೀಸಲಾಗಿದೆ ಎಂದು ಎಸ್ಪಿ ಸಿದ್ದಾರ್ಥ ತಿಳಿಸಿದ್ದಾರೆ.
ಒಟ್ಟಿನಲ್ಲಿ ಒಂದೂವರೆಯಿಂದ ಎರಡು ಎಕರೆ ಆಸ್ತಿ ವಿವಾದದಲ್ಲಿ ರಕ್ತ ಸಂಬಂಧವನ್ನು ಮರೆತು ಅತ್ತಿಗೆ ಕೊಲೆ ಮಾಡೋದಕ್ಕೆ ವ್ಯಕ್ತಿಯೊಬ್ಬ ನಿಂತಿದ್ದು ಮಾತ್ರ ವಿಪರ್ಯಾಸದ ಸಂಗತಿ.
