ಎಸ್ಐಆರ್ ವಿರೋಧಿ ಹೋರಾಟ ತೀವ್ರಗೊಂಡಿದ್ದು, ಇಂದು ಪ್ರಕಾಶ್ ರಾಜ್ ನೇತೃತ್ವದ ನಾಗರಿಕ ನಿಯೋಗವು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ‘ಎಸ್ಐಆರ್ ಪರಿಶೋಧನಾ ವರದಿ ಸಲ್ಲಿಸಿದೆ.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ನೇತೃತ್ವದ ನಾಗರಿಕ ಮತಕಾವಲು ಸಮಿತಿ ಎಸ್ಐಆರ್ ವಿರೋಧಿ ಒಕ್ಕೂಟದ ನಿಯೋಗವು ಬುಧವಾರ ಭೇಟಿ ನೀಡಿ ಮಹತ್ವದ ‘ಎಸ್ಐಆರ್ ಪರಿಶೋಧನಾ ವರದಿ’ಯನ್ನು ಸಲ್ಲಿಸಿದ್ದು, ಈ ಸಂದರ್ಭದಲ್ಲಿ ನೂರ್ ಶ್ರೀಧರ್, ಎಂ. ಲಕ್ಷ್ಮಣ್ ಹಾಗೂ ವೀರಸಂಗಯ್ಯ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
