Vijaypura

ವಿಜಯಪುರದಲ್ಲಿ ಒಣ ದ್ರಾಕ್ಷಿ ಆನ್ಲೈನ್ ಮಾರ್ಕೆಟಿಂಗ್, ವಹಿವಾಟು ಗಣನೀಯ ಏರಿಕೆ ದ್ರಾಕ್ಷಿ ಬೆಳೆಗಾರರಿಗೆ ಬಂಪರ್ ಬೆಲೆ…

Share

ರಾಜ್ಯದಲ್ಲೇ ಅತೀ ಹೆಚ್ಚಿನ ದ್ರಾಕ್ಷಿಯನ್ನು ಈ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಈಗ ಒಣದ್ರಾಕ್ಷಿ ಮಾರುಕಟ್ಟೆಯಲ್ಲಿ ಈಗ ಡಿಜಿಟಲ್ ಕ್ರಾಂತಿ ಶುರುವಾಗಿದೆ. ಮಧ್ಯವರ್ತಿಗಳ ಶೋಷಣೆಗೆ ಬ್ರೇಕ್ ಬಿದ್ದಿದ್ದು, ಆನ್‌ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಭರ್ಜರಿ ಶುಕ್ರದೆಸೆ ಆರಂಭವಾಗಿದೆ. ಹಿಂದೆ ಬರಿ 5 ಕೋಟಿ ರೂಪಾಯಿ ಯಷ್ಟಿದ್ದ ಮಾರುಕಟ್ಟೆ ವಹಿವಾಟು, 16 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು ದ್ರಾಕ್ಷಿ ಬೆಳೆಗಾರರಿಗೆ ಬಂಪರ್ ಬೆಲೆ ಸಿಗುತ್ತಿದೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ವಿಜಯಪುರದ ಎಪಿಎಂಸಿ ಆನ್‌ ಲೈನ್ ಒಣದ್ರಾಕ್ಷಿ ಮಾರುಕಟ್ಟೆ ಯಲ್ಲೀಗ ಹೊಸ ಸಂಚಲನ ಸೃಷ್ಟಿಸಿದೆ. ಖಾಸಗಿ ಅಸೋಸಿಯೇಷನ್‌ಗಳ ಕಪಿ ಮುಷ್ಠಿಯಲ್ಲಿ ಸಿಲುಕಿ ಬೆಲೆ ಸಿಗದೆ ಕಂಗಾಲಾಗಿದ್ದ ದ್ರಾಕ್ಷಿ ಬೆಳೆಗಾರರಿಗೆ ಈಗ ಆನ್‌ಲೈನ್ ಟ್ರೇಡಿಂಗ್ ಹೊಸ ಭರವಸೆ ಮೂಡಿಸಿದೆ. ಇನ್ನು ಖಾಸಗಿಯವರ ಬಹಿರಂಗ ಹರಾಜಿನಲ್ಲಿ ನಡೆಯುತ್ತಿದ್ದ ಅಕ್ರಮ ಹಾಗೂ ಶೋಷಣೆಗೆ ಕಡಿವಾಣ ಹಾಕಲು ಎಪಿಎಂಸಿ ಅಧಿಕಾರಿಗಳು ಮತ್ತು ದ್ರಾಕ್ಷಿ ಬೆಳೆಗಾರರೊಂದಿಗೆ ಮಹತ್ವದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವಾರದಲ್ಲಿ ಎರಡು ಬಾರಿ ಕಡ್ಡಾಯವಾಗಿ ಆನ್‌ಲೈನ್ ಮಾರುಕಟ್ಟೆಯಲ್ಲೇ ವಹಿವಾಟು ನಡೆಸಲು ನಿರ್ಧರಿಸಲಾಗಿತ್ತು. ಈ ಒಂದೇ ಒಂದು ತೀರ್ಮಾನ ಇಡೀ ಮಾರುಕಟ್ಟೆಯ ಚಿತ್ರಣವನ್ನೇ ಬದಲಾಯಿಸಿದೆ. ಆಗಸ್ಟ್ 11 ರಂದು ನಡೆದ ಆನ್‌ಲೈನ್ ಹರಾಜು ಪ್ರಕ್ರಿಯೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಹಿಂದೆ 2.17 ಲಕ್ಷ ಕೆಜಿ ಇದ್ದ ವಹಿವಾಟು, ಈಗ 6 ಲಕ್ಷ 86 ಸಾವಿರ ಕೆಜಿಗೆ ಏರಿಕೆಯಾಗಿ ಸರಾಸರಿ 5 ಕೋಟಿಯಷ್ಟಿದ್ದ ಮಾರುಕಟ್ಟೆ ಮೌಲ್ಯ, ಏಕಾಏಕಿ 16, ಕೋಟಿಗೆ ಹೆಚ್ಚಳವಾಗಿದೆ. ಪ್ರತಿ ಕೆಜಿ ಒಣದ್ರಾಕ್ಷಿ ದರ ರೂ 270 ರಿಂದ ರೂ 403 ಕ್ಕೆ ಏರಿಕೆಯಾಗಿದೆ. ಭಾಗವಹಿಸುತ್ತಿದ್ದ ಖರೀದಿದಾರರ ಸಂಖ್ಯೆ 14 ರಿಂದ 25 ಕ್ಕೆ ಹಾಗೂ ದಲಾಳಿಗಳ ಸಂಖ್ಯೆ 23ಕ್ಕೆ ಹೆಚ್ಚಳವಾಗಿದ್ದು…

ಇನ್ನೂ ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಹಾಗೂ ಶನಿವಾರ ಆನ್ ಲೈನ್ ಟ್ರೇಡಿಂಗ್ ಮಾಡಲಾಗುತ್ತದೆ. ಇದರಿಂದಾಗಿ ಆನ್‌ಲೈನ್ ವ್ಯವಸ್ಥೆಯಿಂದಾಗಿ ತೆರಿಗೆ ವಂಚನೆಗೂ ಬ್ರೇಕ್ ಬಿದ್ದಿದ್ದು, ಸರ್ಕಾರದ ಬೊಕ್ಕಸಕ್ಕೂ ಸೆಸ್ ಮತ್ತು ಜಿಎಸ್‌ಟಿ ರೂಪದಲ್ಲಿ ಕೋಟ್ಯಂತರ ರೂಪಾಯಿ ಆದಾಯ ಹರಿದು ಬರುತ್ತಿದ್ದು ರೈತರಿಗೂ ಅನುಕೂಲವಾಗುವದು. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿದ್ದು ನಗರ ಶಾಸಕ ಯತ್ನಾಳ ಅವರು ಎಂದು ಕೋಲ್ಡ್ ಸ್ಟೋರೇಜ್ ಸಿಬ್ಬಂದಿ ಹಾಗೂ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ…

ರಾಜ್ಯದಲ್ಲಿ ಹೆಚ್ಚಾಗಿ ದ್ರಾಕ್ಷೀ ಬೆಳೆಯುವ ವಿಜಯಪುರ ಜಿಲ್ಲೆಯ ರೈತರು ಈಗ ಸಂತಸ ಗೊಂಡಿದ್ದಾರೆ. ಒಂದೆಡೆ ಒಣ ದ್ರಾಕ್ಷಿಗೆ ಆನ್ ಲೈನ್ ಟ್ರೇಡಿಂಗ್ ನಲ್ಲಿ ಉತ್ತಮ‌ ಬೆಲೆ ದೊರೆಯುತ್ತಿದ್ದು, ದಲ್ಲಾಳಿಗಳ ಹಾವಳಿಗೆ ಕಡಿವಾಣ ಬಿದ್ದಿದಕ್ಕೆ ರೈತರು ಸಂತಸಗೊಂಡಿದ್ದಾರೆ…

ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.

Tags:

error: Content is protected !!