Belagavi

ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ RAF ರೂಟ್ ಮಾರ್ಚ್…

Share

ಬೆಳಗಾವಿ ನಗರದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ, ತ್ವರಿತ ಕಾರ್ಯಪಡೆ (ಆರ್‌ಎಎಫ್) ತುಕಡಿಯು ನಗರದ ಪ್ರಮುಖ ಬಡಾವಣೆಗಳಲ್ಲಿ ಭರ್ಜರಿ ರೂಟ್ ಮಾರ್ಚ್ ನಡೆಸಿದೆ.

ಗಣೇಶೋತ್ಸವದ ಶಾಂತಿಯುತ ಆಚರಣೆಗೆ ಬೆಳಗಾವಿ ಪೊಲೀಸ್ ಆಡಳಿತವು ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದ್ದು, ಇದರ ಒಂದು ಭಾಗವಾಗಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರ್‌ಎಎಫ್ ತುಕಡಿಯು ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸಿತು. ಸಿಪಿಐ ಉಸ್ಮಾನ್ ಅವಟಿ ಅವರ ನೇತೃತ್ವದಲ್ಲಿ ನಡೆದ ಈ ಪಥಸಂಚಲನವು ಶಾಹೂ ನಗರ, ಆಝಮ್ ನಗರ, ನೆಹರು ನಗರ ಹಾಗೂ ಸದಾಶಿವ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು.
ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವುದು ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಎಚ್ಚರಿಕೆ ನೀಡುವುದು ಈ ಕವಾಯತಿನ ಮುಖ್ಯ ಉದ್ದೇಶವಾಗಿತ್ತು. ಉತ್ಸವದ ಸಮಯದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಕಡಕ್ ಸಂದೇಶ ರವಾನಿಸಿದೆ.

Tags:

error: Content is protected !!