ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿಪ್ಪಾಣಿ-ಪಟ್ಟಣಕುಡಿ ಪ್ರದೇಶದಲ್ಲಿ ‘ಜಿ+2’ (G+2) ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಯೋಜನೆಯ ಮನೆಗಳ ವಿತರಣಾ ಪ್ರಕ್ರಿಯೆಗೆ ವೇಗ ನೀಡಲಾಗಿದೆ.ಈ ಮಹತ್ವಾಕಾಂಕ್ಷಿ ಯೋಜನೆಗೆ ಶಶಿಕಲಾ ಜೊಲ್ಲೆ ನಿರಂತರ ಪ್ರಯತ್ನ ಹಾಗೂ ಸತತ ಪರಿಶ್ರಮದಿಂದ ಚಾಲನೆ ದೊರೆತು,ಈಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.ಪ್ರತಿಯೊಬ್ಬ ಬಡ ಹಾಗೂ ಅರ್ಹ ಕುಟುಂಬಕ್ಕೂ ಸ್ವಂತ ಮನೆಯ ಹಕ್ಕು ಸಿಗಬೇಕು ಮತ್ತು ಅವರ ಜೀವನ ಸುಖಮಯವಾಗಬೇಕು ಎಂಬುವುದೇ ನನ್ನ ಪ್ರಮುಖ ಉದ್ದೇಶವಾಗಿದೆ.

ಈ ಬೃಹತ್ ವಸತಿ ಯೋಜನೆಯಡಿ ಒಟ್ಟು 1,812 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಈಗಾಗಲೇ ಸುಮಾರು 600 ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಹಾಗೂ ಇನ್ನಷ್ಟು 200 ಮನೆಗಳು ಅಂತಿಮ ಹಂತದಲ್ಲಿವೆ. ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಸ್ವಂತ ಸೂರಿನ ಆಸರೆಯನ್ನು ಕಲ್ಪಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ಅದು ಈಗ ಹಂತ-ಹಂತವಾಗಿ ಸಾಕಾರಗೊಳ್ಳುತ್ತಿದೆ.
ಈ ವಸತಿ ಯೋಜನೆಯಡಿ ನಿಗದಿತ ನಾಲ್ಕು ಕಂತುಗಳನ್ನು ಪಾವತಿಸಿದ 1,021 ಅರ್ಜಿದಾರರ ಅರ್ಹತಾ ಪರಿಶೀಲನೆಯನ್ನು ನಿಪ್ಪಾಣಿ ನಗರಸಭೆ ಆಡಳಿತ ಮಂಡಳಿಯು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸಂಬಂಧಪಟ್ಟ ಅರ್ಜಿದಾರರ ಅಗತ್ಯ ದಾಖಲೆಗಳು ಹಾಗೂ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ನಮ್ಮ ನಿರಂತರ ಪ್ರಯತ್ನದ ಫಲವಾಗಿ, ಪ್ರಥಮ ಹಂತದಲ್ಲಿ ಅರ್ಹತೆ ಪಡೆದ 600 ಫಲಾನುಭವಿಗಳಿಗೆ ಮುಂಬರುವ ದಸರಾ ಹಬ್ಬದ ಶುಭ ಸಂದರ್ಭದಲ್ಲೇ ಮನೆಗಳನ್ನು ಹಸ್ತಾಂತರಿಸಲಾಗುವುದು. ಸಾಮಾನ್ಯ ಕುಟುಂಬಗಳ ಸ್ವಂತ ಮನೆಯ ಕನಸನ್ನು ನನಸು ಮಾಡುವುದೇ ನನ್ನ ಮೊದಲ ಆದ್ಯತೆಯಾಗಿದ್ದು, ಆ ಕನಸು ಇಂದು ನನಸಾಗುತ್ತಿದೆ.
- ಶಶಿಕಲಾ ಅ. ಜೊಲ್ಲೆ
ಶಾಸಕರು – ನಿಪ್ಪಾಣಿ ಮತಕ್ಷೇತ್ರ
