Hukkeri

ಹುಕ್ಕೇರಿ : ಜಿಲ್ಲೆಯಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸಿದ ಕಿರ್ತಿ ಕಿರಣ ಸವದತ್ತಿ ಯವರಿಗೆ ಸಲ್ಲುತ್ತದೆ – ಆರೋಗ್ಯ ಅಧಿಕಾರಿ ಉದಯ.

Share

ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸಿದ ಕಿರ್ತಿ ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮದ ಹಿರಿಯ ಪ್ರಯೋಗಶಾಲೆ ತಂತ್ರಜ್ಞ ಕಿರಣ ಸವದತ್ತಿಯವರಿಗೆ ಸಲ್ಲುತ್ತದೆ ಎಂದು ಹುಕ್ಕೇರಿ ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ ಹೇಳಿದರು.

ಕಳೆದ 26 ವರ್ಷಗಳಿಂದ ಹುಕ್ಕೇರಿ ತಾಲೂಕಿನ ಗುಡ್ಡುಗಾಡು ಪ್ರದೇಶದ ಇಸ್ಲಾಂಪೂರ, ಬಸ್ಸಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ಇಗ ಕಿತ್ತೂರ ತಾಲೂಕಿಗೆ ಪದನ್ನೊತಿ ಹೊಂದಿ ವರ್ಗಾವಣೆ ಯಾದ ಪ್ರಯೋಗಶಾಲಾ ತಂತ್ರಜ್ಞ ಕಿರಣ ಸವದತ್ತಿ ಯವರ ಬಿಳ್ಕೊಡುವ ಸಮಾರಂಭ ಜರುಗಿತು.
ಬೆಳಗಾವಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಆರ್ ಆರ್ ಅಂಟಿನ ನವರ ಅದ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಸಚಿವ ಸತಿಶ ಜಾರಹೋಳಿಯವರ ಆಪ್ತ ಸಹಾಯಕ ಜಂಗ್ಲಿಸಾಬ್ ನಾಯಕ ಮಾತನಾಡಿ ಕಿರಣ ಸವದತ್ತಿ ಯವರು ಆರೋಗ್ಯ ಇಲಾಖೆಯ ಯೋಜನೆಗಳು ಬಡಜನರಿಗೆ ತಲುಪಿಸುವ ಪ್ರಾಮಾಣಿಕ ಸೇವೆ ಮಾಡಿದ್ದಾರೆ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದರು

ನಂತರ ಬಸ್ಸಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಕುಮಾರಿ ಸಾಕ್ಷಿ ಮೋಟೆಕರ ಹಾಗೂ ಸಿಬ್ಬಂದಿಗಳು ಕಿರಣ ದಂಪತಿಗಳಿಗೆ ಆತ್ಮಿಯವಾಗಿ ಸತ್ಕರಿಸಿ ಅಭಿನಂದಿಸಿದರು.
ಹುಕ್ಕೇರಿ ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ ಮಾದ್ಯಮಗಳೊಂದಿಗೆ ಮಾತನಾಡಿ ಗುಡ್ಡುಗಾಡು ಪ್ರದೇಶದ ಈ ಭಾಗದಲ್ಲಿ ವಿಷೇಶವಾದ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹ ಮಾಡುದ ಕಿರ್ತಿ ಕಿರಣ ಸವದತ್ತಿಯವರಿಗೆ ಸಲ್ಲುತ್ತದೆ ಎಂದರು
ನಂತರ ಜೆಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಅಭಿಮಾನಿಗಳು ಮತ್ತು ಗ್ರಾಮಸ್ಥರು ವರ್ಗಾವಣೆ ಗೊಂಡ ಸವದತ್ತಿಯವರಿಗೆ ಆತ್ಮಿಯವಾಗಿ ಸತ್ಕರಿಸಿ ಬಿಳ್ಕೊಟ್ಟರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸವದತ್ತಿ ಬಸ್ಸಾಪೂರ ಆರೋಗ್ಯ ಕೇಂದ್ರವನ್ನು ನಿರಂತರ ಹೆರಿಗೆ ಆಸ್ಪತ್ರೆ ಮಾಡುವ ಗುರಿ ಹೊಂದಿದ ನಾನು ಈಗ ವರ್ಗಾವಣೆ ಗೊಂಡಿದ್ದೆನೆ ,ಸುಧಿರ್ಘ ಅವಧಿಯಗೆ ಕಾರ್ಯ ನಿರ್ವಹಿಸಲು ಮತ್ತು ಸಹಾಯ ಸಹಕಾರ ನೀಡಿದ ಇಲಾಖೆ ಅಧಿಕಾರಿಗಳಿಗೆ, ಮುಖಂಡರಿಗೆ, ಗ್ರಾಮಸ್ಥರಿಗೆ ಚಿರಖುಣಿಯಾಗಿದ್ದೆನೆ ಎಂದರು
ಈ ಸಂದರ್ಭದಲ್ಲಿ ಶ್ರೀಮತಿ ದೀಪಾ ಕುಂದಗೋಳ, ಶಿವಾನಂದ ವಾರಿಮನಿ ,ರಾಜುಗೌಡಾ ಪಾಟೀಲ,ರಾಜು ಬೆಣ್ಣಿ,ಭಿಮಶಿ ಕಳ್ಳಿಮನಿ,ಮಂಜುನಾಥ ಬಿಸನಳ್ಳಿ,ಈರಣ್ಣಾ ಜೋಂಡ,ಗಜಾನನ ಪಾಟೀಲ ಮತ್ತು ಆಶಾ,ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!