ಹುಕ್ಕೇರಿ ಮತ ಕ್ಷೇತ್ರದ ಜನತೆ ಕೃಷಿ ಇಲಾಖೆಯ ಯೋಜನೆಗಳ ಸದುಪಯೊಗ ಪಡೆದುಕೊಳದಳ ಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.
ಹುಕ್ಕೇರಿ ಕೃಷಿ ಇಲಾಖೆ ವತಿಯಿಂದ 2026 – 27 ನೇ ಸಾಲಿನ ಕೃಷಿ ಯಾಂತ್ರಿಕರಣ ಯೋಜನೆ ಅಡಿಯಲ್ಲಿ ಸುಮಾರು 137 ಜನ ರೈತರಿಗೆ ಯಂತ್ರೋಪಕರಣ ವಿತರಣೆ ಕಾರ್ಯಕ್ಕೆ ಶಾಸಕ ನಿಖಿಲ್ ಕತ್ತಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.


ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಮಹಾದೇವ ಪಟಗುಂದಿ ಮಾತನಾಡಿ ಸಾಮಾನ್ಯ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ರೈತರ ಮಾನದಂಡನೆ ಹಾಗೂ ಫಲಾನುಭವಿಗಳ ಆಯ್ಕೆ ಕುರಿತು ಶಾಸಕರಿಗೆ ವಿವರಣೆ ನೀಡಿದರು

ನಂತರ ಫಲಾನುಭವಿಗಳಿಗೆ ಎಂ ಬಿ ನೇಗಿಲಗಳು, ರೋಟಾವೇಟರ, ಪವರ ಟಿಲ್ಲರ, ಒಕ್ಕಣಿ ಯಂತ್ರ,ಮೇವು ಕಟಾವು ಯಂತ್ರ ಸೇರಿದಂತೆ ಟ್ರ್ಯಾಕ್ಟರ ಚಾಲಿತ ಯಂತ್ರ ಗಳನ್ನು ರೈತರಿಗೆ ವಿತರಿಸಿ ಪ್ರಮಾಣ ಪತ್ರ ನೀಡಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದ ಅಡಿಯಲ್ಲಿ ಸಹಾಯಧನ ಪಡೆದ ರೈತರಿಗೆ ಇಂದು ಯಂತ್ರೋಪಕರಣಗಳನ್ನು ನೀಡಲಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದರು

ಇದೆ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಕೃಷಿಕ ಸಮಾಜದ ಅದ್ಯಕ್ಷ ನ್ಯಾಯವಾದಿ ಬಿ ಕೆ ಮಗೆನ್ನವರ ಮಾತನಾಡಿ ರಾಜ್ಯ ಸರ್ಕಾರ ಹುಕ್ಕೇರಿ ತಾಲೂಕು ಬರಗಾಲ ಪ್ರದೇಶ ಎಂದು ಘೋಷಣೆ ಮಾಡುವಂತೆ ಆಗ್ರಹಿಸಲು ಶಾಸಕರು ಅಧಿವೇಶನದಲ್ಲಿ ದ್ವನಿ ಎತ್ತಬೇಕು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಶಾಸಕರು ಈಗಾಗಲೇ ಬೇಳೆ ಹಾನಿ ಕುರಿತು ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ಅದರಂತೆ ಪರಿಹಾರಕ್ಕಾಗಿ ಸರ್ಕಾರದ ಗಮನ ಹರಿಸಲಾಗುವದು ಎಂದರು

ಈ ಸಂದರ್ಭದಲ್ಲಿ ವಿದ್ಯುತ್ ಸಹಕಾರಿ ಸಂಘದ ಅದ್ಯಕ್ಷ ಮಹಾವಿರ ನಿಲಜಗಿ, ಗುರು ಕುಲಕರ್ಣಿ, ಸತ್ಯಪ್ಪಾ ನಾಯಿಕ, ಎ ಕೆ ಪಾಟೀಲ, ಶಿತಲ್ ಬ್ಯಾಳಿ, ರಾಚಯ್ಯ ಹಿರೇಮಠ,ಪರಪ್ಪ ವಾಸೇದಾರ, ಪರಪ್ಪಾ ಮಗದುಮ್ಮ,ಶಿವಗೌಡಾ ಪಾಟೀಲ ಉಪಸ್ಥಿತರಿದ್ದರು.
ಕೃಷಿ ಅಧಿಕಾರಿಗಳಾದ ರಾಘವೇಂದ್ರ ತಳವಾರ, ಶಿವಾನಂದ ಕಮತ, ಪ್ರಕಾಶ ಪಾಟೀಲ ರವರು ಶಾಸಕರಿಗೆ ಸತ್ಕರಿಸಿ ಅಭಿನಂದಿಸಿದರು .
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
