Hukkeri

ಹುಕ್ಕೇರಿ : ರೈತರು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ – ಅದ್ಯಕ್ಷ ಬಸವರಾಜ ಕಲ್ಲಟ್ಟಿ

Share

ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ರೈತರು ಹುಕ್ಕೇರಿ ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ಸಂಸ್ಥೆಗೆ ಸಹಕರಿಸ ಬೇಕು ಎಂದು ಕಾರ್ಖಾನೆ ಅದ್ಯಕ್ಷ ಬಸವರಾಜ ಕಲ್ಲಟ್ಟಿ ರೈತರಲ್ಲಿ ಮನವಿ ಮಾಡಿಕೊಂಡರು.

ಕಾರ್ಖಾನೆ ಆವರಣದಲ್ಲಿ ಜರುಗಿದ ಸದಸ್ಯರ ಮತ್ತು ರೈತರ ಸಭೆಯಲ್ಲಿ ಮಾತನಾಡಿ ದಿವಂಗತ ಅಪ್ಣಣಗೌಡರು ಹಾಗೂ ಅವರ ಸಂಗಡಿಗರು ಸ್ಥಾಪಿಸಿದ ಈ ಸಂಸ್ಥೆ ಇತ್ತೀಚಿನ ಬೆಳವಣೆಗೆಯ ಸಂದಿಗ್ದ ಪರಿಸ್ಥಿತಿಯಲ್ಲೂ ಕಬ್ಬು ಪೊರೈಸಿದ ರೈತರಿಗೆ ಪ್ರತಿ ಟನ್ನಿಗೆ 3360 ರೂಪಾಯಿ ಹಾಗೂ ಉನ್ನತ ಮಟ್ಟದ ಸಕ್ಕರೆ ನಿಡಲಾಗಿದೆ ಕಾರಣ ಬರುವ ಹಂಗಾಮಿನಲ್ಲಿ ರೈತರು ಕಬ್ಬು ಪೋರೈಸಿ ಕಾರ್ಖಾನೆ ಪ್ರಗತಿಗೆ ಸಹಕರಿಸಬೇಕು ಎಂದರು

ವೇದಿಕೆ ಮೇಲೆ ಸಂಚಾಲಕರಾದ ಪ್ರಭುದೇವ ಪಾಟೀಲ, ಬಸವರಾಜ ಮರಡಿ, ಸುರೇಂದ್ರ ದೊಡಲಿಂಗನವರ, ಶಿವಪುತ್ರ ಶಿರಕೊಳಿ, ಬಾವಾಸಾಹೇಬ ಅರಬೊಳೆ, ಮಲ್ಲಿಕಾರ್ಜುನ ಪಾಟೀಲ, ವ್ಯವಸ್ಥಾಪಕ ನಿರ್ದೆಶಕ ಡಿ ಎಸ್ ಮಹಾದೇವಸ್ವಾಮಿ, ಕಾರ್ಯಾಲಯ ಅಧಿಕ್ಷಕ ಸುಭಾಷ ನಾಶಿಪುಡಿ, ಲೇಖಪಾಲ ಚಿದಾನಂದ ಮರೇದಿ ಹಾಗೂ ಮುಖಂಡರು ಉಪಸ್ಥಿತರಿದ್ದರು.

ನಂತರ ಉಪಾದ್ಯಕ್ಷ ಅಶೋಕ ಪಟ್ಟಣಶೇಟ್ಟಿ ಮಾತನಾಡಿ ಈ ಹೋಸ ಆಡಳಿತ ಮಂಡಳಿಗೆ ಸದಸ್ಯರು ರೈತರು ತಮ್ಮದೆಯಾದ ಕಾರ್ಖಾನೆ ಉಳುವಿಗಾಗಿ ನೂತನ ಆಡಳಿತಮಂಡಳಿಗೆ ಸಹಕರಿಸ ಬೇಕು ಎಂದು ವಿನಂತಿಸಿದರು
ಈ ಸಂದರ್ಭದಲ್ಲಿ ಸಾವಿರಾರು ಜನ ರೈತರು, ಕಾರ್ಖಾನೆ ಸದಸ್ಯರು ಉಪಸ್ಥಿತರಿದ್ದರು.


ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!