ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಕುರಿತು ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಯು ಆಡಳಿತ ಹಾಗೂ ವಿಪಕ್ಷಗಳ ನಡುವಿನ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಯಿತು. ಸಭೆಯಲ್ಲಿ ಸದಸ್ಯ ನವೀನ್ ಅವರು ಹಸಿರು ಶಾಲು ಧರಿಸಿ ಭಾಗವಹಿಸಿದ್ದು ಭಾರೀ ಕೋಲಾಹಲ ಹಾಗೂ ಗದ್ದಲಕ್ಕೆ ಕಾರಣವಾಯಿತು.

ರಾಜ್ಯ ವಿಧಾನ ಪರಿಷತ್ತಿನಲ್ಲಿ ಇಂದು ತೀವ್ರ ಬರಗಾಲದ ಕುರಿತು ನಡೆದ ಚರ್ಚೆಯು ಶಾಲಿನ ರಾಜಕಾರಣದ ಸ್ವರೂಪ ಪಡೆದುಕೊಂಡು ಗದ್ದಲಕ್ಕೆ ಎಡೆಮಾಡಿಕೊಟ್ಟಿತು. ಚರ್ಚೆಯ ಆರಂಭದಲ್ಲೇ ಸದಸ್ಯ ನವೀನ್ ಅವರು ಹಸಿರು ಶಾಲನ್ನು ಧರಿಸಿ ಮಾತನಾಡಲೂ ನಿಂತುಕೊಂಡರು. ಇದು ರೈತರ ಪರ ಕೃತಕ ಪ್ರೀತಿ ಎಂದು ಆಡಳಿತ ಪಕ್ಷದವರು ಗೇಲಿ ಮಾಡಿದವು. ಇದಕ್ಕೆ ತಿರುಗೇಟು ನೀಡಿದ ನವೀನ್, ಕೇಸರು, ಬಿಳಿ ಮತ್ತು ಹಸಿರು ನಮ್ಮ ಉಸಿರು ಎಂದು ಸಮರ್ಥಿಸಿಕೊಂಡರು. ಸಿಎಂ ಹಾಗೂ ಪಿಎಂ ಅವರ ಶಾಲೂಗಳ ಕುರಿತೂ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು.
ಈ ಮಾತಿನ ವಾಗ್ದಾಳಿಯಿಂದ ಸದನದಲ್ಲಿ ಭಾರಿ ಕೋಲಾಹಲ ಉಂಟಾಗಿ, ರೈತ ವಿರೋಧಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ವಿಪಕ್ಷ ಸದಸ್ಯರು ಸದನದ ಭಾವಿಗಿಳಿದು ಪ್ರತಿಭಟನೆ ನಡೆಸಿದರು. ಆಡಳಿತ ಮತ್ತು ವಿಪಕ್ಷಗಳ ನಡುವಿನ ಈ ಜಟಾಪಟಿಯಿಂದಾಗಿ ಕಲಾಪವನ್ನು ಮುಂದೂಡಬೇಕಾಯಿತು.
ಬರಗಾಲದಂತಹ ಗಂಭೀರ ಸಮಸ್ಯೆಯನ್ನು ಬದಿಗಿಟ್ಟು ರಾಜಕಾರಣಿಗಳು ಶಾಲಿನ ಬಣ್ಣದ ರಾಜಕೀಯದಲ್ಲಿ ನಿರತರಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
