Vijaypura

ವಿಜಯಪುರದಲ್ಲಿ ಹಾಡಹಗಲೇ ಫೈನಾನ್ಸ್ ಉದ್ಯಮಿ ಬರ್ಬರ ಹತ್ಯೆ; ಮಚ್ಚಿನಿಂದ ಕೊಚ್ಚಿ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳ ಪರಾರಿ

Share

ವಿಜಯಪುರ: ನಗರದಲ್ಲಿ ಹಾಡಹಗಲೇ ನಡೆದ ಬರ್ಬರ ಹತ್ಯೆ ಪ್ರಕರಣ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ನಗರದ ಮುಬಾರಕ್ ಚೌಕ್ ಸಮೀಪ ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ, ಬಳಿಕ ಕಲ್ಲು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಮೃತರನ್ನು ಶರಣು ಮಲ್ಲೇಶಪ್ಪ ಜೀವರ್ಗಿ (48) ಎಂದು ಗುರುತಿಸಲಾಗಿದೆ. ಅವರು ನಗರದ ಕಾಳಿಕಾ ನಗರದ ನಿವಾಸಿಯಾಗಿದ್ದು, ಸ್ವಂತ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ನಿತ್ಯದಂತೆ ಪಿಗ್ಮಿ ಕಲೆಕ್ಷನ್‌ಗಾಗಿ ಬುಧವಾರ ಸಂಜೆ ಮುಬಾರಕ್ ಚೌಕ್ ಪ್ರದೇಶಕ್ಕೆ ಬಂದಿದ್ದ ವೇಳೆ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆಯೇ ಗೋಲಗುಂಬಜ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ತನಿಖೆಯ ಬಳಿಕವೇ ಕೊಲೆಯ ಹಿಂದಿನ ನಿಖರ ಕಾರಣ ಬೆಳಕಿಗೆ ಬರಲಿದ್ದು, ಈ ಘಟನೆ ವಿಜಯಪುರ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ

Tags:

error: Content is protected !!