ಬೆಳಗಾವಿ ಜಿಲ್ಲಾ ದೇಹದಾರ್ಢ್ಯ ಸಂಘದ 31ನೇ ವಾರ್ಷಿಕ ಸಾಮಾನ್ಯ ಸಭೆಯು ಟಿಳಕವಾಡಿಯ ಆರ್ಟ್ ಆಫ್ ಲಿವಿಂಗ್ ಹ್ಯಾಪಿನೆಸ್ ಸೆಂಟರ್‌ನಲ್ಲಿ ಯಶಸ್ವಿಯಾಗಿ ನೆರವೇರಿತು. ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ದೇಹದಾರ್ಢ್ಯ ಕ್ರೀಡೆಯ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.

ಬೆಳಗಾವಿಯ ಟಿಳಕವಾಡಿಯ ಸೋಮವಾರ ಪೇಟೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಹ್ಯಾಪಿನೆಸ್ ಸೆಂಟರ್‌ನಲ್ಲಿ ಬೆಳಗಾವಿ ಜಿಲ್ಲಾ ದೇಹದಾರ್ಢ್ಯ ಸಂಘದ 31ನೇ ವಾರ್ಷಿಕ ಸಾಮಾನ್ಯ ಸಭೆ ಸೌಹಾರ್ದಯುತ ವಾತಾವರಣದಲ್ಲಿ ಜರುಗಿತು. ಕಾರ್ಯದರ್ಶಿ ಹೇಮಂತ ಹಾವಳ ಸ್ವಾಗತಿಸಿ, ವರದಿ ವಾಚಿಸಿದರು. ಖಜಾಂಚಿ ಬಸವರಾಜ ಅರಳಿಮಟ್ಟಿ 2023-24 ಹಾಗೂ 2024-25ನೇ ಸಾಲಿನ ಲೆಕ್ಕಪತ್ರ ಮಂಡಿಸಿದ್ದು, ಸರ್ವಾನುಮತದ ಒಪ್ಪಿಗೆ ದೊರೆಯಿತು. ಗೌರವಾಧ್ಯಕ್ಷ ಅವಿನಾಶ ಪೋತದಾರ ಹಾಗೂ ಸಂಸ್ಥಾಪಕ ಪ್ರಕಾಶ ಪೂಜಾರಿ, ಅಜಿತ ಸಿದ್ಧಣ್ಣವರ, ಎಮ್. ಕೆ. ಗುರವ್ ಸೂಕ್ತ ಸಲಹೆ ನೀಡಿದರು. ಇದೇ ವೇಳೆ ಅಧ್ಯಕ್ಷರಾಗಿ ಎಮ್. ಗಂಗಾಧರ, ಕಾರ್ಯದರ್ಶಿಯಾಗಿ ಹೇಮಂತ ಹಾವಳ, ಉಪಾಧ್ಯಕ್ಷರಾಗಿ ಸುನಿಲ ಆಪಟೇಕರ, ದಿಲೀಪ ಚಿಟಣೀಸ, ಸಹ ಕಾರ್ಯದರ್ಶಿಯಾಗಿ ಮಾರುತಿ ದೇವಗೇಕರ, ಖಜಾಂಚಿಯಾಗಿ ಸುನಿಲ ಪವಾರ, ಮೆನ್ ಮತ್ತು ವುಮೆನ್ ಅಥ್ಲೀಟ್ ಆಗಿ ಪ್ರತಾಪ ಕಾಲಕುಂದ್ರಿ ಹಾಗೂ ಕೆತಕಿ ಪಾಟೀಲ ಆಯ್ಕೆಯಾದರು. ಆಯೋಜನಾ ಸಮಿತಿಗೆ ರಾಜು ನಲವಡೆ, ಆಕಾಶ ಹುಲಿಯಾರ, ಗಜಾನನ ಹಂಗರಗೇಕರ, ನಾಗರಾಜ ಕೋಲಕಾರ, ನೂರ್ ಮುಲ್ಲಾ, ಕಿರ್ತೇಶ ಕಾವಳೆ, ಸಚಿನ್ ಮೋಹಿತೆ, ಸುನಿಲ ಅಷ್ಟೇಕರ, ಅಶ್ವಿನ್ ನಿಂಗಣ್ಣವರ, ರಮೇಶ ಕಳ್ಳಿಮನಿ, ಕಾಟೇಶ ಗೋಕಾವಿ ಹಾಗೂ ಕಾರ್ಯಕಾರಿ ಮಂಡಳಿಗೆ ಅನಂತ ಲಂಗರಕಾಂಡೆ, ಗಣೇಶ ಗುಂಡಪ್, ರಿಯಾಜ್ ಚೌಗುಲಾ, ಶೇಖರ ಜಾನವೇಕರ ಆಯ್ಕೆಯಾದರು.
