ಅಗಸ್ಟ್ 13 ರಂದು ಆರಂಭವಾಗಲಿರುವ ರಾಜ್ಯ ವಿಧಾನ ಸೌಧ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಪಕ್ಷವನ್ನು ನಾವುವಸದನ ನಡೆಸಲು ಬೀಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್ ಆಶೋಕ ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ರಿಯಾಕ್ಟ್ ಮಾಡಿ ಸರಿಯಾಗಿ ಹೇಳಿದ್ದಾರೆ ಎಂದು ಹೇಳುವ ಮೂಲಕ ವಿಕ್ಷನಾಯಕರ ಹೇಳಿಕೆಯನ್ನು ಬೆಲ್ಲದವರಿ ಸಮರ್ಥಸಿಕೊಂಡಿದ್ದಾರೆ.

ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಸಿದ್ದರಾಯ್ಯವರ ಅವಧಿಯಲ್ಲಿ ಹಾಲಿ ಸಚಿವ ಬಿ ನಾಗೇಂದ್ರರವರು ವಾಲ್ಮೀಕಿ ನಿಗಮ ಮಂಡಳಿ ಹಗರಣದಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಮಾಜಿ ಸಿಎಂ ಅವರು ಸದನದಲ್ಲಿಯೇ ಒಪ್ಪಿಕೊಂಡಿದ್ದರು. ಜತೆಗೆ ನಾಗೇಂದ್ರರವರು ಜೈಲಿಗೂ ಕೂಡಾ ಹೋಗಿ ಬಂದರು. ಇದರ ಮೇಲೆಯು ಈಗ ಅಂತವರನ್ನು ಸಚಿರಾಗಿ ಮಾಡಲಾಗಿದೆ. ನಾಗೇಂದ್ರರವರ ಮೇಲೆ ಆರೋಪ ಇನ್ನೂ ಹೋಗಿಲ್ಲ, ಅಂತವರಿಗೆ ಮಂತ್ರಿ ಮಾಡೋಕ್ಕೆ ಕಾಂಗ್ರೆಸಗೆ ಹೇಗ ಮನಸ್ಸು ಬಂತೋ ಗೊತ್ತಿಲ್ಲ. ನಾವಂತೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದರು. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಮಧು ಬಂಗಾರಪ್ಪ ಮಾತಾಡಿದ ಆಡಿಯೋ ವಿಚಾರಕ್ಕೆ ಮಾತನಾಡಿ, ಬಿಡದಿ ಹೋರಾಟದಲ್ಲಿ ನಾವು ಕುಡಾ ಇದ್ದೆವೆ. ರಾಮನಗರದಿಂದ ಹೋರಾಟದಲ್ಲಿ ಆರ್ ಅಶೋಕ್ ಮತ್ತು ವಿಜಯಮದ್ರ ಕೂಡಾ ಭಾವಹಿಸಿದ್ದರು. ನಾವು ನಮ್ಮ ಪಕ್ಷ ಜೆಡಿಎಸ್ ಜೊತೆ ಹೋರಾಟ ಮಾಡುತಿದ್ದೆವೆ. ಈ ವಿಚಾರಕ್ಕೆ ಅಧಿವೇಶನದಲ್ಲಿ ಕೂಡಾ ಹೋರಾಟ ಮಾಡಬೇಕು ಎಂದಿದೆ, ಎಲ್ಲರೂ ಸೇರೇ ಮಾಡ್ತೆವೆ. ಇನ್ನೂ ಮಹದಾಯಿ ವಿಚಾರ ಕೋರ್ಟ್ ನಲ್ಲಿದೆ,
ಕಾವೇರಿ ಸಿಎಂ ಹೇಗೆ ವಕೀಲರ ತಂಡ ಕಳಿಸ್ತಾರೊ ಅದೇ ರೀತಿ ಮಹದಾಯಿ ಬಗ್ಗೆ ಕೂಡಾ ಕಲಿಸಬೇಕು. ಮಹದಾಯಿ ಬಗ್ಗೆ ಸಭೆ ಕರೆದರೆ ಯಾರೊಬ್ಬ ಸಚಿವರು ಅಲ್ಲಿ ಹೋಗಲ್ಲ, ಸಿಎಂ ಅಥವಾ ಸಚಿವರು ಅಲ್ಲಿ ಹೋದರೆ ಅವರಿಗೆ ಒತ್ತಡ ಬರಲಿದೆ. ಆಗ ಸಮಸ್ಯೆ ಬಗೆಹರಿಸಬಹುದು, ಸುಮ್ಮನೇ ರಾಜಕೀಯ ಮಾತಾಡುತ್ತ ಕುಳಿತರೆ ಉಪಯೋಗ ಇಲ್ಲಾ. ಸಿಎಂ ಜವಾಬ್ದಾರಿ ಇದೆ, ವನ್ಯ ಜೀವ ಮಂಡಳಿಗೆ ಒಳ್ಳೆಯ ವಕೀಲರನ್ನ ನೇಮಕ ಮಾಡಲಿ. ಸಭೆ ಇದ್ದಾಗ ಅಧಿಕಾರಿಗಳನ್ನು ಕಳಿಸದೇ ಅವರು ಭಾಗವಹಿಸಲಿ ಎಂದು ತಿಳಿಸಿದರು.
ಬೈಟ್ ಅರವಿಂದ ಬೆಲ್ಲದ, ವಿಪಕ್ಷ ಉಪನಾಯಕ.
