ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ವಿನಯಕ ಕುಲಕರ್ಣಿಗೆ, ಹೈಕೋರ್ಟ್ ಶಿಕ್ಷೆಗೆ ತಡೆ ನೀಡಿ ಜಾಮೀನು ಮಂಜೂರು ಮಾಡುವುದರ ಜತೆಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಿದ ಬೆನ್ನಲೆ ವಿನಯ ಬೆಂಬಲಿಗರು ಸ್ವಾಗತಕ್ಕೆ ಭರ್ಜರಿ ಸಿದ್ಧತೆಯಲ್ಲಿ ಮಾಡಿಕೊಳ್ಳುತ್ತಿದ್ದಾರೆ.

ಹೌದು.. ಕಳೆದ 2016 ಜೂನ್ 15 ರಂದು ಧಾರವಾಡ ಸಪ್ತಾಪುರ ಉದಯ ಜಿಮನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ ಬಿಜೆಪಿ ಮುಖಂಡ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿನಯಕ ಕುಲಕರ್ಣಿಯವರು ಸೇರಿ 17 ಜನಕ್ಕೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಈಗ ಹೈಕೋರ್ಟ ಕುಲಕರ್ಣಿ ಶಿಕ್ಷೆಗೆ ತಡ ನೀಡಿ, ಜಾಮೀನು ಮಂಜೂರು ಮಾಡಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಿರುವುದು ವಿನಯ ಬೆಂಬಲಿಗರಲ್ಲಿ ಸಂಭ್ರಮದ ವಾತಾವರಣ ನೀಡಿದ್ದು, ಈಗ ಕುಲಕರ್ಣಿ ಬೆಂಬಲಿತರು ಸೊಸಿಯಲ್ ಮೀಡಿಯಾ ಹಾಗೂ ರಸ್ತೆ ಬೀದಿಯಲ್ಲಿ ವಿನಯವರಿಗೆ ಸ್ವಾಗತ ಬ್ಯಾನರ ಜತೆಗೆ ಪೋಸ್ಟರ್ಗಳು ಜೋರಾಗಿವೆ. ವಿನಯ ಕುಲಕರ್ಣಿ ಆಪ್ತ ಸಹಾಯಕರಾಗಿರುವ ಪ್ರಶಾಂತ್ ಸೇರಿ ಬೆಂಬಲಿತರು ಬ್ಯಾನರಗಳನ್ನು ಧಾರವಾಡದ ಬೀದಿಗಳಲ್ಲಿ ರಾರಾಜಿಸುತ್ತಿವೆ. ಅಷ್ಟೇಯಲ್ಲದೆ ಅನೇಕ ಬೆಂಬಲಿಗರು ಸೊಸಿಯಲ್ ಮೀಡಿಯಾದಲ್ಲಿ ಕುಲಕರ್ಣಿ ಸ್ವಾಗತದ ಪೋಸ್ಟರ್ಗಳನ್ನು ಹಾಕಿಕೊಳ್ಳುವ ಮೂಲಕ ತಮ್ಮ ನಾಯಕನ ಮೇಲಿನ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.
