ಮನೆ,ಗುಡಿ ಸೇರಿ ಬೈಕ್ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳನನ್ನು ಹೆಡೆಮುರಿ ಕಟ್ಟುವಲ್ಲಿ ಧಾರವಾಡ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧತನಿಂದ ಬರೊಬ್ಬರಿ 5 ಲಕ್ಷ 38ಸಾವಿರ ಮೌಲ್ಯದ ಕಳ್ಳತನ ವಸ್ತುಗಳ ಜಪ್ತಿ.

ಹುಬ್ಬಳ್ಳಿ ಟಿಂಬರ್ ಯಾರ್ಡನ್ ಸಿದ್ದರಾಮೇಶ್ವರ ನಗರ ಮೂಲದ ಪ್ರಸ್ತುತ ಧಾರವಾಡ ಗಾಂಧಿ ಚೌಕ್ ಬಸ್ತಿ ಗಲ್ಲಿ ನಿವಾಸಿಯಾಗಿರುವ ಅಸೀಫ್ ಕಾಶಿಂಸಾಬ್ ಬೇಗ್ (29) ಬಂಧಿತ ಆರೋಪಿಯಾಗಿದ್ದಾನೆ. ಇನ್ನೂ ಬಂಧಿತ ಆರೋಪಿಯ ಖಚಿತ ಮಾಹಿತಿ ಮೇರೆಗೆ ಶಹರ ಪೊಲೀಸರು ಚಾಲಾಕಿ ಕಳ್ಳನನ್ನು ಬಲೆ ಕೆಡವಿದ್ದು, ವಿಚಾರಣೆ ವೇಳೆ ಎರಡು ಮನೆ, ಒಂದು ದೇವಸ್ಥಾನ ಹಾಗೂ ಒಂದು ಬೈಕ್ ಕಳ್ಳತನದ ವಿಚಾರ ಬಯಲಿಗೆ ಬಂದಿದೆ. ಒಟ್ಟು ನಾಲ್ಕು ಪ್ರಕರಣದಲ್ಲಿ ಬಂಧಿತ ಆರೋಪಿ ಇರುವುದು ತಿಳಿದು ಬಂದಿದೆ. ಬಂಧಿತನಿಂದ 42 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿ, ಒಂದು ದ್ವಿಚಕ್ರ ವಾಹನ ಸೇರಿ ಒಟ್ಟು ಅಂದಾಜು 5ಲಕ್ಷ 38ಸಾವಿರ ಮೌಲ್ಯದ ಕಳ್ಳತನದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಸದ್ಯ ವಿಚಾರಣೆ ಪೂರ್ಣಗೊಂಡ ಹಿನ್ನಲೆಯಲ್ಲಿ ಬಂಧಿತ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಕಳ್ಳನನ್ನು ಕಂಬಿ ಹಿಂದೆ ತಳ್ಳಿದ್ದಾರೆ.
