Dharwad

ಆರ್.ಬಿ. ತಿಮ್ಮಾಪುರ ಆಡಿಯೋ ವೈರಲ್ ವಿಚಾರ ಧಾರವಾಡದಲ್ಲಿ ಪ್ರತಿಕ್ರಿಯೆ….

Share

ಆಡಿಯೋದಲ್ಲಿ ನನ್ನ ಹೆಸರು ಇರಬಹುದು ಆದರೆ ನಾನು‌ ಮಾತಾಡಿಲ್ಲ. ಹೈಕಮಾಂಡ್ ಆಗಲಿ ಸಿಎಂ ಗಾಗಲಿ ಟಾರ್ಗೆಟ್ ಮಾಡಿ ಮಾತಾಡಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಡಿಯೋವನ್ನು ಮಾಜಿ ಸಚಿವ ಆರ್ ಬಿ ತಿಮ್ಮಾಪುರವರು ಒಪ್ಪಿಕೊಂಡಿದ್ದಾರೆ.

ಧಾರವಾಡದಲ್ಲಿ ಆಡಿಯೋ ವಿಚಾರವಾಗಿ ಪ್ರತಿಕ್ರೆಯೆ ನೀಡಿದ ಅವರು, ಇದರಲ್ಲಿ ಯಾಕೆ ನನ್ನ ಎಳಿತೀರಾ..?,ವಿಜಯಾನಂದ ಕಾಶಪ್ಪನವರ ಬಗ್ಗೆ ಚರ್ಚೆ ನಡೀತಿತ್ತು. ಜಿಲ್ಲಾ ಮಂತ್ರಿ ಬಗ್ಗೆ ಚರ್ಚೆ ಮಾಡ್ತಾಯಿದ್ದಿವಿ‌. ನಮ‌್ಮ ಜಿಲ್ಲೆಯ ವಿಚಾರ ಪಕ್ಷದಲ್ಲಿ ಮಾತಾಡುತ್ತೇವೆ. ವಿಜಯಾನಂದ ಕಾಶಪ್ಪನವರಗೆ ಸಚಿವ ಸ್ಥಾನ ಕೊಟ್ಟಿದು‌ ಖುಷಿ. ನಾನು ಮೂರು ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಅವರ ಕೇಸ್ ಬಗ್ಗೆ ನಾನು ಮಾತಾಡಿಲ್ಲ. ನಾನು ಮಾತಾಡಿಲ್ಲ ಮಾತಾಡಿದವರಿಗೆ ಕೇಳಿ. ನಂಜಯನ್ನ‌ಮಠ ಜೊತೆ ಮಾತಾಡಿದ್ದಾನೆ ಅನ್ನಲಾಗ್ತಿದೆ. ನಾನು ಯಾವುದೇ ಪಕ್ಷ ನಾಯಕರ ಬಗ್ಗೆ ಮಾತಾಡಿಲ್ಲ. ಜಿಲ್ಲಾಧ್ಯಕ್ಷರು ಮಾತಾಡಿದ ಬಗ್ಗೆ‌ ನನಗೆ ಗೊತ್ತಿಲ್ಲ. ಜಿಲ್ಲಾಧ್ಯಕ್ಷ ಅವರನ್ನೇ ಕೇಳಿ. ನಾನು ಅದಕ್ಕೆ ಪ್ರತಿಕ್ರಿಯೆ ನೀಡಲ್ಲ. ನಾನಜ ತಪ್ಪು ಮಾತಾಡಿದರೇ ನನಗೆ ಕೇಳಿ. ಸಚಿವ ಸ್ಥಾನಕ್ಕೆ 80% ಕಮಿಷನ್ ಆರೋಪ ವಿಚಾರವಾಗಿ. ನಮ್ಮ ಪಾರ್ಟಿ ಅಲ್ಲಿ ಇಂತಹದಕ್ಕೆ ಸಾಧ್ಯವಿಲ್ಲ,ನಮ್ಮ ಪಾರ್ಟಿ ಅಲ್ಲಿ ಅಂತದ್ಯಾವುದು ನಡಿಯಲ್ಲ. ಕಾಶಪ್ಪನವರ್ ಅವರ ಕಾರ್ಯಕರ್ತರಿಗೆ ತಿಳುವಳಿಕೆ ಇಲ್ಲ, ಹೀಗಾಗಿ ಪ್ರತಿಭಟನೆ ಮಾಡ್ತಿರಬಹುದು. ಆಡಿಯೋದಲ್ಲಿ ನಾನು ಏನೂ ಮಾತಾಡಿಲ್ಲ. ಹೆಚ್.ಕೆ ಪಾಟೀಲ್ ಗೆ ಕೊಡಬೇಕು ಅಂತ ಕೇಳಿದ್ದೀನಿ.

ಜಿಲ್ಲಾ ಮಂತ್ರಿ ಬಗ್ಗೆ ಕೊಡಬೇಕು ಅಂತ‌ ಇದೆ. ಸಚಿವ ಸ್ಥಾನ ಸಿಗದಕ್ಕೆ ಬೇಸರವಿದ್ಯಾ ಎಂಬ ಪ್ರಶ್ನೆ ವಿಚಾರವಾಗಿ. ಸಹಜವಾಗಿ ಅಸಮಾಧಾನ ಇದೆ. ಸಮುದಾಯ ಕೇಳ್ತಾಯಿದೆ. ಸಮುದಾಯದ ಕೆಲಸ ಮಾಡೋರು ಯಾರು ಅಂತ ಕೇಳ್ತಿದ್ದಾರೆ. ನನ್ನ ಸಚಿವ ಸ್ಥಾನದಿಂದ ಯಾಕೆ ತೆಗೆದರು ಅಂತ ನನಗೆ ಹೇಳಲಿ, ಬೇರೆಯವರ ಬಗ್ಗೆ ನಾನ್ಯಾಕೆ ಹೇಳಲಿ. ಹೈಕಮಾಂಡ ತೀರ್ಮಾನಕ್ಕೆ ನಾನು ಬದ್ದ,ನಾಳೆ ಏನ್ ತೀರ್ಮಾನ ತೆಗೆದುಕೊಂಡರು ನಾನು ಬದ್ದ. ನನಗೆ ಅದರ ಬಗ್ಗೆ ಗೊತ್ತಿಲ್ಲ ಎಂದ ಆರ್.ಬಿ.ತಿಮ್ಮಾಪುರ ಪ್ರತಿಕ್ರೆಯಿಸಿದ್ದಾರೆ.‌

Tags:

error: Content is protected !!