DEATH

ಅಗಸಗಿ ದೇವಸ್ಥಾನ ಪಂಚರಾದ ಬಸನಗೌಡ ನಿಂಗನಗೌಡ ಪಾಟೀಲ ನಿಧನ.

Share

ಅಗಸಗಿ ಗ್ರಾಮದ ಲಕ್ಷ್ಮೀ ಗಲ್ಲಿ ನಿವಾಸಿ, ದೇವಸ್ಥಾನ ಪಂಚರು, ಕಮಿಟಿ ಮಾಜಿ ಅಧ್ಯಕ್ಷರು, ಊರಿನ ಗೌಡರು ಹಾಗೂ ಪ್ರತಿಷ್ಠಿತ ಪೊಲೀಸ್ ಪಾಟೀಲ ಮನೆತನದ ಹಿರಿಯರಾದ ಬಸನಗೌಡ ನಿಂಗನಗೌಡ ಪಾಟೀಲ ನಿನ್ನೆ ಸಾಯಂಕಾಲ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಇವರಿಗೆ 77 ವರ್ಷ ವಯಸ್ಸಾಗಿತ್ತು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಒರ್ವ ಪುತ್ರಿ , ಇಬ್ಬರು ಸಹೋದರರು, ಸೊಸೆಯಂದಿರು, ಅಳಿಯಂದಿರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.

ಮೃತರು ಗ್ರಾಮದ ಪೊಲೀಸ್ ಪಾಟೀಲರಾಗಿದ್ದು, ಗ್ರಾಮದ ಧಾರ್ಮಿಕ ,ಸಾಮಾಜಿಕ, ರಾಜಕೀಯ ಹಾಗೂ ಇತರೆ ಕಾರ್ಯಗಳಲ್ಲಿ ಪ್ರಮುಖರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದಾ ಸಾಮಾಜಿಕ ಕಳಕಳಿಯ ಉದ್ದೇಶಕ್ಕಾಗಿ ಶ್ರಮಿಸುವ ಕುಟುಂಬದ ಹಿರಿಯ ಜೀವಿಯಾಗಿದ್ದರು. ಕಿರಿಯ ಸಹೋದರ ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಅಧ್ಯಕ್ಷರಾಗಿದ್ದು, ಹಿರಿಯ ಪುತ್ರ ಅಗಸಗಿ ಪ್ರೌಢಶಾಲೆಯಲ್ಲಿ ಸಿಬ್ಬಂದಿಯಾಗಿ, ಕಿರಿಯ ಪುತ್ರ ಕರ್ನಾಟಕ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಗ್ರಾಮದ ಲಕ್ಷ್ಮೀದೇವಿ ಜಾತ್ರೆಯ ಸಿದ್ಧತೆಗಾಗಿ ಬಸನಗೌಡ ಪಾಟೀಲ ಹಗಲಿರುಳು ಶ್ರಮಿಸುತ್ತಿದ್ದ ಇವರು ಹೃದಯಾಘಾತದಿಂದ ಮಂಗಳವಾರ ಸಂಜೆ ನಿಧನರಾದರು.

ಮೃತರ ಅಂತ್ಯಕ್ರಿಯೆ ನಾಳೆ (ಬುಧವಾರ ದಿ: 5 ಜುಲೈ) ಬೆಳಗ್ಗೆ ಅಗಸಗಿ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಿತು.

ಮೃತರ ಅಗಲಿಕೆಗೆ ಅಗಸಗಿ , ಚಲವೇನಟ್ಟಿ, ಮಾಳೆನಟ್ಟಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಸಂತಾಪ ಸೂಚಿಸಿ, ಕಂಬನಿ ಮಿಡಿದು ಶ್ರದ್ಧಾಂಜಲಿ ಅರ್ಪಿಸಿದರು.

Tags:

error: Content is protected !!