Ramdurg

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಬಾಗಲಕೋಟೆ ಆಸ್ಪತ್ರೆಯಲ್ಲಿ ಸಾವು

Share

ರಾಮದುರ್ಗ ತಾಲೂಕಿನ ಕಿಲಬನೂರ ಗ್ರಾಮದ ಬಳಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸವಾರ ಫಕ್ಕೀರಪ್ಪ ಯಲ್ಲಪ್ಪ ಬಟ್ಟೆನ್ನವರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಾಂಗ್ ಸೈಡ್‌ನಲ್ಲಿ ಅತಿವೇಗವಾಗಿ ಬಂದು ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ರಾಮದುರ್ಗದಿಂದ ಹಲಗತ್ತಿ ಕಡೆಗೆ ಆಗಸ್ಟ್ 21 ರಂದು ತಮ್ಮ ಹೀರೋ ಎಚ್.ಎಫ್. ಡಿಲಕ್ಸ್ ಬೈಕಿನಲ್ಲಿ ಹೋಗುತ್ತಿದ್ದ ಲಿಂಗದಾಳ ಗ್ರಾಮದ ಫಕ್ಕೀರಪ್ಪ ಯಲ್ಲಪ್ಪ ಬಟ್ಟೆನ್ನವರ (34) ಅವರು, ಕಿಲಬನೂರ ಗ್ರಾಮದ ಹದ್ದಿಯ ಘಟಕನೂರ ಕ್ರಾಸ್ ಬಳಿ ರಾಂಗ್ ಸೈಡ್‌ನಲ್ಲಿ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಬಂದು, ಎದುರಿನಿಂದ ಸವದತ್ತಿಯ ಅಭಿಷೇಕ ಪಾಂಡುರಂಗ ಮಡಿವಾಳರ (27) ಎಂಬುವವರು ಚಲಾಯಿಸುತ್ತಿದ್ದ ಯಮಹಾ ಎಫ್‌ಜೆಡ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಲ್ಲಿ ಅಭಿಷೇಕ ಪಾಂಡುರಂಗ ಮಡಿವಾಳರ ಹಾಗೂ ಬೈಕ್‌ನಲ್ಲಿದ್ದ ದೂರುದಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ರಸ್ತೆಗೆ ಬಿದ್ದು ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ ಕಮ್ ಗಾಯಾಳು ಫಕ್ಕೀರಪ್ಪ ಯಲ್ಲಪ್ಪ ಬಟ್ಟೆನ್ನವರ (ಜಟ್ಟೆನ್ನವರ) ಅವರು ಆಗಸ್ಟ್ 24 ರಂದು ರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದು, ಪ್ರಕರಣದಲ್ಲಿ ಬಿ.ಎನ್.ಎಸ್-2023ರ ಕಲಂ 106(1) ನ್ನು ಹೆಚ್ಚುವರಿಯಾಗಿ ಅಳವಡಿಸಿಕೊಂಡು ರಾಮದುರ್ಗ ವೃತ್ತದ ಸಿ.ಪಿ.ಐ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Tags:

error: Content is protected !!