Chikkodi

ನಿಧನದ ಬಳಿಕವೂ ದೇಹದಾನ ಮಾಡುವ ಮೂಲಕ ಸಾರ್ಥಕತೆ ಮೆರೆದ ಲಿಂಗರಾಜ ಪಾಟೀಲ

Share

ಚಿಕ್ಕೋಡಿ:ತಾಲೂಕಿನ ಸಿದ್ಧಾಪುರವಾಡಿ ಗ್ರಾಮದ ನಿವಾಸಿಯಾದ ಲಿಂಗರಾಜ ಅಪ್ಪಯ್ಯಗೌಡ ಪಾಟೀಲ ಅವರು ನಿಧನರಾದ ನಂತರ, ತಮ್ಮ ದೇಹವನ್ನು ವೈದ್ಯಕೀಯ ಶಿಕ್ಷಣಕ್ಕಾಗಿ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.

ಲಿಂಗರಾಜ ಪಾಟೀಲ ಅವರು ಸರಳ, ಸ್ವಾಭಿಮಾನಿ ಹಾಗೂ ನಿಸ್ಸ್ವಾರ್ಥ ಸೇವಾ ಮನೋಭಾವದ ವ್ಯಕ್ತಿಯಾಗಿದ್ದರು. ತಮ್ಮ ನೇರ ನುಡಿ ಹಾಗೂ ಸ್ಪಷ್ಟ ನಿಲುವಿನಿಂದ ಗ್ರಾಮದಲ್ಲಿ ಅಪಾರ ಗೌರವವನ್ನು ಗಳಿಸಿದ್ದರು.

ಅವರ ನಿಧನದ ಬಳಿಕ, ಕುಟುಂಬದವರ ಪೂರ್ಣ ಒಪ್ಪಿಗೆಯೊಂದಿಗೆ ದೇಹವನ್ನು ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು. ಈ ಮೂಲಕ ಅವರು ಸಿದ್ಧಾಪುರವಾಡಿ ಗ್ರಾಮದ ಪ್ರಥಮ ‘ದೇಹದಾನಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪವಿತ್ರ ಶ್ರಾವಣ ಮಾಸದ ಸೋಮವಾರದಂದು ಲಿಂಗೈಕ್ಯರಾದ ಲಿಂಗರಾಜ ಪಾಟೀಲ ಅವರ ಸಾರ್ಥಕ ಬದುಕು ಹಾಗೂ ದೇಹದಾನದ ನಿರ್ಧಾರ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅವರ ಅಗಲ ಆಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ

Tags:

error: Content is protected !!