Belagavi

ಮಹಾರಾಷ್ಟ್ರದ ನೆಲದಲ್ಲಿ ದಲಿತ ನಾಯಕ ಮಲ್ಲೇಶ್ ಚೌಗಲೆ ಅವರಿಗೆ ಸನ್ಮಾನ

Share

ಗಡಹಿಂಗ್ಲಜ್ |

ಸಾಹಿತ್ಯ ಸಾಮ್ರಾಟ ಲೋಕಶಾಹೀರ್ ಅಣ್ಣಾಭಾವು ಸಾಠೆ ಅವರ 106ನೇ ಜಯಂತಿಯ ಅಂಗವಾಗಿ ಗಡಹಿಂಗ್ಲಜ್‌ನಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಜಯಂತಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಾಹಿತ್ಯ ಸಾಮ್ರಾಟ ಲೋಕಶಾಹೀರ್ ಅಣ್ಣಾಭಾವು ಸಾಠೆ ಜಯಂತಿ ಉತ್ಸವ ಸಮಿತಿ, ಗಡಹಿಂಗ್ಲಜ್–ಚಂದಗಡ–ಆಜ್ರಾ ಹಾಗೂ ಸಂಯುಕ್ತ ಭೀಮನಗರ ಇವರ ವತಿಯಿಂದ ಭಾನುವಾರ, ಆಗಸ್ಟ್ 16ರಂದು ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಭಾಂಗಣ ಆಯೋಜಿಸಲಾಗಿತ್ತು.

ಕರ್ನಾಟಕದ ದಲಿತ ಮುಖಂಡ ಹಾಗೂ ಸಮಾಜಸೇವಕ ಮಲ್ಲೇಶ್ ಚೌಗುಲೆ (ಬೆಳಗಾವಿ) ಅವರನ್ನು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರೀಫ್ ಅವರು ಸನ್ಮಾನಿಸಿದರು
ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ
ಸುರೇಶ್ ತಳವಾರ, ಆರ್‌ಪಿಐ ಮುಖಂಡ ಸತೀಶ್ ಮಾಳಗೆ, ಕೊಲ್ಲಾಪುರ್ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸರ್ಕಾರದ ವೈದ್ಯಕೀಯ ಸಚಿವರು ಹಸನ್ ಮುಶ್ರೀಫ್ ಅವರು ಅಣ್ಣಾಭಾವು ಸಾಠೆ ಅವರ ಸಾಹಿತ್ಯಿಕ ಹಾಗೂ ಸಾಮಾಜಿಕ ಕೊಡುಗೆಯನ್ನು ಶ್ಲಾಘಿಸಿದರು. ಅಣ್ಣಾಭಾವು ಅವರು ತಮ್ಮ ಸಾಹಿತ್ಯ ಮತ್ತು ವಿಚಾರಗಳ ಮೂಲಕ ಸಮಾಜದ ವಂಚಿತ ಹಾಗೂ ತಳಮಟ್ಟದ ಜನರಿಗೆ ದಿಕ್ಕು ತೋರಿಸಿದ್ದಾರೆ ಎಂದು ಹೇಳಿದರು ಸಮಾಜದ ಪ್ರತಿಯೊಂದು ವರ್ಗವೂ ಶಿಕ್ಷಣಕ್ಕೆ ಆದ್ಯತೆ ನೀಡಿ ಪ್ರಗತಿ ಸಾಧಿಸಬೇಕು ಹಾಗೂ ಮೂಢನಂಬಿಕೆ ಮತ್ತು ಅನಿಷ್ಟ ಪದ್ಧತಿಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.

ಗಡಹಿಂಗ್ಲಜ್‌ನಲ್ಲಿ ಸಮುದಾಯ ಭವನ ಹಾಗೂ ಅಣ್ಣಾಭಾವು ಸಾಠೆ ಅವರ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.

ಸನ್ಮಾನಕ್ಕೆ ಸ್ವೀಕರಿಸಿ ಮಾತನಾಡಿದ ದಲಿತ ಮುಖಂಡರುಗಳಾದ ಮಲ್ಲೇಶ್ ಚೌಗುಲೆ ಅವರು ಅಣ್ಣಾಭಾವು ಸಾಠೆ ಅವರ ಸಾಹಿತ್ಯಿಕ ಹಾಗೂ ಸಾಮಾಜಿಕ ಕಾರ್ಯವನ್ನು ಸ್ಮರಿಸಿದರು. ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಅಣ್ಣಾಭಾವು ಅವರು ಬರವಣಿಗೆ ನಡೆಸಿ ಸಮಾಜದ ವಂಚಿತ ವರ್ಗಗಳ ಸಮಸ್ಯೆಗಳಿಗೆ ಧ್ವನಿಯಾಗಿದ್ದರು ಎಂದು ಹೇಳಿದರು.

ಅಣ್ಣಾಭಾವು ಸಾಠೆ ಅವರು ರಷ್ಯಾಕ್ಕೆ ತೆರಳಿ ಅಲ್ಲಿಯೂ ತಮ್ಮ ವಿಚಾರಗಳು ಮತ್ತು ಸಾಹಿತ್ಯವನ್ನು ಪ್ರಸ್ತುತಪಡಿಸಿದ್ದರು ಎಂದು ಹೇಳಿದ ಚೌಗುಲೆ, ಅವರ ಕಾರ್ಯವನ್ನು ಸ್ಮರಿಸಿದರು. ಸಮಾಜದಲ್ಲಿನ ಅನಿಷ್ಟ ಸಂಪ್ರದಾಯಗಳು ಹಾಗೂ ಮೂಢನಂಬಿಕೆಗಳನ್ನು ದೂರ ಮಾಡಲು ಜಾಗೃತಿ ಅಗತ್ಯವಾಗಿದ್ದು, ಶಿಕ್ಷಣದ ಮೂಲಕ ಸಮಾಜ ಮುಂದೆ ಸಾಗಬೇಕು ಎಂದು ಕರೆ ನೀಡಿದರು. ಶಿಕ್ಷಣ ಪಡೆದು ಸ್ವಂತ ಪ್ರಗತಿಯ ಜೊತೆಗೆ ಸಮಾಜಕ್ಕೂ ಕೊಡುಗೆ ನೀಡಬೇಕು ಎಂದು ಹೇಳಿದರು.

‘ಅಣ್ಣಾಭಾವು ಅವರ ಸಾಹಿತ್ಯ ಮತ್ತು ಸಂವಿಧಾನ’ ವಿಷಯದ ಕುರಿತು ಉಪನ್ಯಾಸ

ಕಾರ್ಯಕ್ರಮದ ಮುಖ್ಯ ಭಾಷಣಕಾರ ಪ್ರಾ. ಪ್ರಕಾಶ್ ನಾಯಕ್ ಅವರು ‘ಅಣ್ಣಾಭಾವು ಅವರ ಸಾಹಿತ್ಯ ಮತ್ತು ಸಂವಿಧಾನ’ ವಿಷಯದ ಕುರಿತು ಮಾರ್ಗದರ್ಶನ ನೀಡಿದರು. ಅಣ್ಣಾಭಾವು ಸಾಠೆ ಅವರ ಸಾಹಿತ್ಯಕ್ಕೂ ಸಾಮಾಜಿಕ ಪರಿವರ್ತನೆಗೂ ಇರುವ ಸಂಬಂಧವನ್ನು ವಿವಿಧ ಉದಾಹರಣೆಗಳ ಮೂಲಕ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಡಹಿಂಗ್ಲಜ್ ನಗರಸಭೆಯ ಪ್ರಭಾರಿ ನಗರಾಧ್ಯಕ್ಷ ಮಹೇಶ್ ಸಲವಾದೆ ವಹಿಸಿದ್ದರು. ಕಾರ್ಯಕ್ರಮವನ್ನು ಗೋದಸಕ್ಕರೆ ಗಡಹಿಂಗ್ಲಜ್‌ನ ನಿರ್ದೇಶಕ ಸತೀಶ್ ಪಾಟೀಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೊಲ್ಹಾಪುರ ಜಿಲ್ಲಾ ಪಂಚಾಯಿತಿ ಸದಸ್ಯ ಅನಿರುದ್ಧ ರೇಡೆಕರ್, ಶಬನಮ್ ಸಯ್ಯದ್, ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕ ಮಲ್ಲೇಶ್ ಚೌಗುಲೆ, ಗಡಹಿಂಗ್ಲಜ್ ಪಂಚಾಯಿತಿ ಸಮಿತಿಯ ಗುಂಪು ಅಭಿವೃದ್ಧಿ ಅಧಿಕಾರಿ ಸಂತೋಷ್ ನಾಗಟಿಳಕ್, ಗಡಹಿಂಗ್ಲಜ್ ಪೊಲೀಸ್ ಠಾಣೆಯ ಪಿಐ ಸತೀಶ್ ಹೊಡಗರ್, ಮಾತಂಗ ಸಮಾಜ ಬೆಳಗಾವಿ ಜಿಲ್ಲಾಧ್ಯಕ್ಷ ಭಾರತ್ ರೋಡ್ಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಕಾರ್ಯಾಧ್ಯಕ್ಷ ಪರಶುರಾಮ್ ಹುಳೆ, ಅಧ್ಯಕ್ಷ ಲಕ್ಷ್ಮಣ್ ದಾವಣೆ (ಮಾಜಿ ಸೈನಿಕ), ಉಪಾಧ್ಯಕ್ಷ ಕಿರಣ್ ಮೇತ್ರಿ, ಕಾರ್ಯದರ್ಶಿ ಸುರೇಶ್ ಚವ್ಹಾಣ್, ಖಜಾಂಚಿ ಪ್ರಕಾಶ್ ಕಾಂಬಳೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು

Tags:

error: Content is protected !!