Chikkodi

ಅಥಣಿಯಲ್ಲಿ ಕನ್ನಡದ ಕಲರವ! ಆ.18ರಂದು ಭರ್ಜರಿ ಕಾರ್ಯಕ್ರಮ | 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Share

ಅಥಣಿಯಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಆಗಸ್ಟ್ 18ರಂದು ‘ಗಡಿ ಕನ್ನಡ ಕಲರವ–2026’ ಕಾರ್ಯಕ್ರಮ ಆಯೋಜಿಸಲಾಗಿದೆ. 21 ಶಾಲೆಗಳಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಮಾರು 6,000 ವಿದ್ಯಾರ್ಥಿಗಳು ಭಾಗವಹಿಸಿದ್ದು, 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.

ಕಾರ್ಯಕ್ರಮಕ್ಕೆ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ ಬಿ ಎನ್ ಜಗದೀಶ ಹಾಗೂ ಕಾನೂನು ಘಟಕದ ರಾಜ್ಯಾಧ್ಯಕ್ಷ ನ್ಯಾಯವಾದಿ ನಾರಾಯಣಸ್ವಾಮಿ ಜೀ, ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ ಎಂದು ತಾಲೂಕಾಧ್ಯಕ್ಷ ಆಕಾಶ ನಂದಗಾಂವ ಅವರು ಹೇಳಿದರು.

ಅವರು ಸ್ಥಳೀಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಘೋಷ್ಠಿಯಲ್ಲಿ ಮಾತನಾಡಿ ಗಡಿ ತಾಲೂಕಿನಲ್ಲಿ ಕನ್ನಡದ ಕಂಪು ಹರಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದು ಅನೇಕ ಗಣ್ಯ ಮಾನ್ಯರು ಆಗಮಿಸಲಿದ್ದು ತಾಲೂಕಿನ ಸಮಸ್ತ ಜನತೆ ಆಗಮಿಸಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.

ಅನಂತರ ಮಾತನಾಡಿದ ತಾಲೂಕು ಉಸ್ತುವಾರಿ ರವಿ ಬಡಕಂಬಿ ಜಯ ಕರ್ನಾಟಕ ಸಂಘಟನೆ ವತಿಯಿಂದ ತಾಲೂಕಿನ 21 ಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದ್ದು 6000 ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ 250 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅಂದು ಪ್ರತಿಭಾ ಪುರಸ್ಕಾರ ಮಾಡಲಿದ್ದೆವೆ ಎಂದರು.

ಅನಂತರ ಮಾತನಾಡಿದ ಮುಖಂಡ ಸಂತೋಷ ಬಡಕಂಬಿ ಗಚ್ಚಿನಮಠದ ಪೂಜ್ಯರು ಸೇರಿದಂತೆ ಅಥಣಿಯ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು, ಅನಂತರ ಪ್ರದೀಪ ಗುಮಚಿ ಅವರು ಮಾತನಾಡಿದರು.

ಈ ವೇಳೆ ಜಯಕರ್ನಾಟಕ ಸಂಘಟನೆಯ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾಗಿರುವಂತಹ ಸಿದ್ದಾರೂಡ ಬಣ್ಣದ, ವಿಜಯ ಬಿಸೆ, ಹನಮಂತ ಕೊಳಗೇರಿ, ಪ್ರಶಾಂತ ಚೌಗಲಾ, ಮಹಾತೇಶ್ ನಾಯಿಕ, ಸಚಿನ ಕಾಂಬಳೆ, ಮಾಳಪ್ಪ ಮಂಗಸೂಳಿ ಸೇರಿದಂತೆ ಅನೇಕರಿದ್ದರು.

Tags:

error: Content is protected !!