ತುಷ್ಟಿಕರಣದ ಪರಾಕಾಷ್ಠೆಯಿಂದ ಪುಷ್ಕರಣಿ ಮೇಲೆ ರಸ್ತೆ ನಿರ್ಮಾಣ : ಪ್ರಲ್ಹಾದ್ ಜೋಶಿ ಆರೋಪ..

ಕಾಂಗ್ರೆಸ್ ಸರ್ಕಾರ ಮುಸ್ಲಿಂರ ತುಷ್ಟಿಕರಣ ಮಾಡುತ್ತಿದೆ.ಕಾಮಗಾರಿ ಬಂದ್ ಮಾಡುವಂತೆ ಮನವಿ ಕೊಡಲಾಗಿತ್ತು. ಆದ್ರೂ ಮತಾಂದ ಶಕ್ತಿಗಳ ಒತ್ತಡಕ್ಕೆ ಮಣಿದು ರಸ್ತೆ ಮಾಡಿದ್ದಾರೆ. ಪುಷ್ಕರಣಿ ಇದೆ ಎಂದು ಬಾಂಬೆ ಗೆಜೆಟಿಯರನಲ್ಲಿದೆ. ತುಷ್ಟಿಕರಣದ ಪರಾಕಾಷ್ಠೆಯಿಂದ ಪುಷ್ಕರಣಿ ಮೇಲೆ ರಸ್ತೆ ನಿರ್ಮಿಸಲಾಗಿದೆ. ಅಧಿಕಾರಿಗಳು ಬಹಳ ತಪ್ಪು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
ಭವಾನಿ ಶಂಕರ ದೇವಾಲಯ ಪುಷ್ಕರಣಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಸಾರ್ ಓಣಿಯಲ್ಲಿರುವ ಭವಾನಿ ಶಂಕರ ದೇವಸ್ಥಾನ,
ಪುಷ್ಕರಣಿ ಮೇಲೆ ನಿರ್ಮಾಣವಾದ ರಸ್ತೆ ವೀಕ್ಷಣೆ ಮಾಡಿ, ಮಾತನಾಡಿ, ನನ್ನ ಬಾಲ್ಯದ ಜೀವನವನ್ನ ಇದೇ ಹಳೇ ಹುಬ್ಬಳ್ಳಿಯ ಭಾಗದಲ್ಲಿ ಕಳೆದಿದ್ದೇನೆ. ಈ ಹಿಂದಿನಿಂದಲೂ ಈ ದೇವಸ್ಥಾನದ ಮೇಲೆ ನಿರಂತರವಾಗಿ ಅಟ್ಯಾಕ್ ಆಗುತ್ತಲೇ ಇದೆ. ದೇವಸ್ಥಾನ 1400 ವರ್ಷಗಳ ಹಿಂದಿನದ್ದು, ಸುರಕ್ಷಿತವಾದ ಪ್ರದೇಶದ ಇದು. ದೇವಸ್ಥಾನದ ನೂರು ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಸೇರಿದಂತೆ ಯಾವುದೇ ಕಾಮಗಾರಿಗೆ ನಿಷೇಧ ಮಾಡಲಾಗಿದೆ. 100 ಮೀಟರ್ ಒಳಗಡೆ ಕಾಮಗಾರಿ ಕೆಲಸ ಮಾಡಿದ್ದಾರೆ. ಕೆಲಸ ಮಾಡುವ ಸಮಯದಲ್ಲಿ ಮನವಿ ಕೊಟ್ಟರು ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎಂದರು.
ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನೂಸುಳುಕೋರರು ಬರಬಾರದೆಂದು ಭದ್ರತೆ ಆಗಿದಂತೆ, ಇಲ್ಲಿ ಇಂದು ಬ್ಯಾರಕೇಡ್ ಹಾಕಲಾಗಿದೆ.
ಕಾಂಗ್ರೆಸ್ ಸರ್ಕಾರ ಮುಸ್ಲಿಂರ ತುಷ್ಟಿಕರಣ ಮಾಡುತ್ತಿದೆ.
ಕಾಮಗಾರಿ ಬಂದ್ ಮಾಡುವಂತೆ ಮನವಿ ಕೊಡಲಾಗಿತ್ತು.
ಮತಾಂದ ಶಕ್ತಿಗಳ ಒತ್ತಡಕ್ಕೆ ಮಣಿದು ರಸ್ತೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ಪಕ್ಷದದಿಂದ ಹಾಗೂ ಹಿಂದು ಸಂಘಟನೆಗಳಿಂದ ಹೋರಾಟ ಮುಂದುವರೆಯುತ್ತದೆ.
ಜೊತೆಗೆ ನಾವು ಕಾನೂನು ಹೋರಾಟ ಮಾಡುತ್ತೇವೆ
ಕಾನೂನು ಹೋರಾಟದ ನಂತ್ರ ತಪ್ಪು ಮಾಡದಿರವರಿಗೆ ತಕ್ಕ ಶಾಸ್ತಿ ಆಗಲಿದೆ. ರಸ್ತೆ ಕಾಮಗಾರಿ ಬಗ್ಗೆ ಮಹಾನಗರ ಪಾಲಿಕೆಯಲ್ಲಿ ಯಾವುದೇ ಠರಾವು ಪಾಸಾಗಿಲ್ಲ.
ಈ ಹಿಂದೆ ಇಲ್ಲಿಯ ಗಣಪತಿ ಮೂರ್ತಿಯನ್ನ ಒಡೆದು ಹಾಕಲಾಗಿತ್ತು. ಪುಷ್ಕರಣಿ ಉತ್ಕಲನ್ ಮಾಡುವ ಬಗ್ಗೆ ಸರ್ಕಾರಕ್ಕೆ ಸಂಘಟನಕಾರರು ಮನವಿ ಮಾಡುತ್ತಾರೆ. 15-20 ವರ್ಷಗಳ ಹಿಂದೆ ಇಲ್ಲಿ ಪುಷ್ಕರಣಿ ಇತ್ತು ಎಂದರು.
ಧಾರವಾಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಅವಕಾಶ ಕೊಡಲ್ಲ, ಇಲ್ಲಿ ಪುಷ್ಕರಣಿ ಸಲುವಾಗಿ ಹೋರಾಟ ಮಾಡಲು ಬಿಡಲ್ಲ.
ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶ ಇದೆ. ಕಾಂಗ್ರೆಸ್ ಸರ್ಕಾರದ ನಾಯಕರು ಕಿಸೆದಲ್ಲಿ ಸಂವಿಧಾನದ ಪ್ರತಿ ಇಟ್ಟುಕೊಂಡು ತಿರುಗುವುದು ಏಕೆ..? ಇಲ್ಲಿನ ಸ್ಥಳೀಯ ಪಾಲಿಕೆಯ ಸದಸ್ಯರು ದಾದಾಗಿರಿ ಮಾಡುತ್ತಿದ್ದಾರೆ..
ಸರ್ಕಾರ ಒಂದು ವರ್ಗದ ಪರವಾಗಿ ಇದೆ, ಅದಕ್ಕಾಗಿ ಪಾಲಿಕೆ ಸದಸ್ಯ ದಾದಾಗಿರಿ ಮಾಡುತ್ತಿದ್ದಾರೆ ಎಂದರು.
