Dharwad

ಅ.26 ರಂದು ಈದ್ ಮಿಲಾದ್ ಹಬ್ಬ ಹಿನ್ನಲೆ…ಯಾವುದೇ ಅಹಿತಕರ ಘಟನೆ ನಡೆಯದಂತೆ ಧಾರವಾಡದಲ್ಲಿ ಹು-ಧಾ ಪೊಲೀಸ್ ಕಮಷಮರೇಟ್‌ನಿಂದ ರೂಟ್ ಮಾರ್ಚ್.

Share

ಅಗಸ್ಟ್ 26 ಅಂದರೆ ನಾಳೆ ಮುಸ್ಲಿಂ ಸಮುದಾಯದ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಧಾರವಾಡದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಪೊಲೀಸ್ ರೂಟ್ ಮಾರ್ಚ್ ನಡೆಸಲಾಯಿತು. ‌

ಧಾರವಾಡ ನಗರದ ಅಂಜುಮನ್ ಸಂಸ್ಥೆಯ ಕಾಲೇಜಿನಿಂದ ಪೊಲೀಸ್ ರೂಟ್ ಮಾರ್ಚ್ ಆರಂಭಿಸಲಾಯಿತು. ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ನೇತೃತ್ವದಲ್ಲಿ ಈ ರೂಟ್ ಮಾರ್ಚ್ ನಡೆದಿದ್ದು, ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ರೂಟ್ ಮಾರ್ಚ್ ಸಾಗಿತ್ತು.‌ ಸುಭಾಷ್ ರಸ್ತೆ, ಗಾಂಧಿ ಚೌಕ್, ಹೊಸಯಲ್ಲಾಪುರ, ಹೆಬ್ಬಳ್ಳಿ ಅಹಸಿ ಸೇರಿದಂತೆ ರೂಟ್ ಮಾರ್ಚ್ ಸಾಗಿತ್ತು. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನರ್ ಎನ್ ಶಶಿಕುಮಾರವರು, ಈಗಾಗಲೇ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಸಮುದಾಯದ ಹಲವು‌ ಮುಖಂಡರು ಡಿಜೆ ಬಳಕೆ ನಿರ್ಬಂಧ ಮಾಡುವಂತೆ ಮನವಿ ಮಾಡಿದ್ದಾರೆ. ಜತೆಗೆ ಈಗಾಗಲೇ ಈ ಕುರಿತು ನಿರ್ಬಂಧ ಮಾಡಿರುವ ಕುರಿತು ಎಲ್ಲರಿಗೂ ತಿಳಿಸಲಾಗಿದೆ. ಈ ಮಧ್ಯೆ ಸೊಸಿಯಲ್ ಮೀಡಿಯಾಗಲ್ಲಿ ಕೆಲವರು ಅನುಮತಿ‌ನೀಡಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಯಾರು ಕೂಡಾ ಈ ರೀತಿಯ ಸುಳ್ಳು ಸುದ್ದಿಗೆ ಕಿವಿಗೊಡಬೇಡಬಾರದು. ಜತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ, ಮುಂಜಾಗ್ರತವಾಗಿ ಪೊಲೀಸ್ ರೂಟ್ ಮಾರ್ಚ್ ನಡೆಸಲಾಗಿದೆ. ನಾಳೆ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ ಕೈಗೊಳಲಾಗಿದೆ. ಯಾರಾದರೂ ಕಾನೂನು ಮೀರಿ ವರ್ಯಿಸಿದ್ದರೆ ಅಂತವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

Tags:

error: Content is protected !!