ನಿತ್ಯವು ಸಾರ್ಜನಿಕರಿಗೆ ಸ್ಥಳೀಯವಾಗಿ ಸಂಚಾರಿ ಸೇವೆ ನೀಡುತ್ತಾ ಬರುತ್ತಿರುವ ಅಟೋ ಚಾಲಕರ ಸಮಾಜಿಕ ಜವಾಬ್ದಾರಿ ಅರಿತು, ಕೆಜೆಪಿ ಫೌಂಡೇಶನ್ ವತಿಯಿಂದ ಅಟೋ ಚಾಲಕರಿಗೆ ಸಾರಥಿ ಕಿಟ್ ವಿತರಣೆ ಮಾಡುವ ಮೂಲಕ ಫೌಂಡೇಶನ್ ಅಟೋ ಚಾಲಕರ ಸೇವೆಯನ್ನು ಗುರುತ್ತಿಸಿದ್ದು, ಈ ಕಾರ್ಯಕ್ಕೆ ಬಿಜೆಪಿ ಮುಖಂಡ ಮಂಜುನಾಥ ಮಕ್ಕಗೇರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಧಾರವಾಡ ಜಯನಗರದ ಮುಖ್ಯ ರಸ್ತೆಯಲ್ಲಿರುವ ಲಿಂಗಾಯತ ಭವನದಲ್ಲಿ ಕೆ.ಜಿ.ಪಿ ಫೌಂಡೇಶನ್ ವತಿಯಿಂದ ಆಟೋ ಚಾಲಕರಿಗೆ ಸಾರಥಿ ಸೇವಾ ಕಿಟ್’ ಆಹಾರದ ಕಿಟ್ ವಿತರಣಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಬಿಜೆಪಿ ಮುಖಂಡ ಮಂಜುನಾಥ ಮಕ್ಕಳಗೇರಿ ಉದ್ಘಾಟಿಸಿದ್ದು, ನಂತರ ಮಾತನಾಡಿ ನಾಡು-ನುಡಿ ಕಟ್ಟುವಲ್ಲಿ ಆಟೋ ಚಾಲಕರ ಪಾತ್ರ ಮಹತ್ವವಾದದ್ದು ಎಂದು ಬಣ್ಣಿಸಿದರು. ಆಟೋ ಚಾಲಕರು ಕವಿಯಂತೆ ತಮ್ಮ ರಿಕ್ಷಾಗಳ ಮೇಲೆ ಸುಂದರ ಕವನಗಳನ್ನು ಬರೆಯುತ್ತಾ ಸಾಗುತ್ತಾರೆ. ಅಷ್ಟೇ ಅಲ್ಲದೆ, ಗೂಗಲ್ ಮ್ಯಾಪ್ ಬರುವ ಮುಂಚಿನಿಂದಲೂ ಸ್ಥಳೀಯ ರಸ್ತೆಗಳ ಪ್ರತಿಯೊಂದು ಮಾರ್ಗದ ಮಾಹಿತಿಯನ್ನು ತಮ್ಮ ಮಿದುಳಿನಲ್ಲಿಟ್ಟುಕೊಂಡಿರುವ ನಿಜವಾದ ಮಾರ್ಗದರ್ಶಕರು ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ಅಟೋರಿಕ್ಷಾ ಚಾಲಕರು “ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ಉಂಟಾಗಿರುವ ಆರ್ಥಿಕ ಸಮಸ್ಯೆಗಳನ್ನು ಮನಗಂಡು, ‘ಆಟೋ ಚಾಲಕರ ಜೊತೆ ನಾವಿದ್ದೇವೆ’ ಎಂಬ ಧೈರ್ಯ ತುಂಬುತ್ತಿರುವ ಶ್ರೀಗಂಧ ಶೇಟ್ ಅವರ ಈ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ KGP ಫೌಂಡೇಶನ್ ಸಂಸ್ಥಾಪಕ ಶ್ರೀಗಂಧ ಶೇಟ್. ಎಂ ಅರವಿಂದ, ಮುತ್ತುರಾಜ ಮಾಕಡವಾಲೆ, ಬಸವರಾಜ ಕಿತ್ತೂರು, ಪ್ರಕಾಶ ಉಳ್ಳಾಗಡ್ಡಿ, ಸುಭಾಷ್ ಸುಣಗಾರ, ಗುರುಪ್ರಸಾದ ಕರೆಡೆಣ್ಣವರ, ಆತ್ಮಾನಂದ ತಳವಾರ, ಶಂಕರ ಮುಗಳಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕರು ಉಪಸ್ಥಿತರಿದ್ದು.
