Vijaypura

ಆಲಮಟ್ಟಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ; 12 ಸಾವಿರ ಕ್ಯೂಸೆಕ್‌ವರೆಗೆ ಹೆಚ್ಚಳ ಸಾಧ್ಯ

Share

ನಾರಾಯಣಪುರ ಜಲಾಶಯದ ಕಾನೂನುಬದ್ಧ ಅಗತ್ಯಗಳನ್ನು ಪರಿಗಣಿಸಿ, ಆಲಮಟ್ಟಿ ಜಲಾಶಯದಿಂದ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಕೃಷ್ಣಾ ನದಿಗೆ 2,500 ಕ್ಯೂಸೆಕ್ ನೀರು ಬಿಡುಗಡೆ ಆರಂಭಿಸ ಲಾಗಿದೆ. ಹಂತ ಹಂತವಾಗಿ ನೀರಿನ ಹರಿವನ್ನು 12,000 ಕ್ಯೂಸೆಕ್‌ವರೆಗೆ ಹೆಚ್ಚಿಸ ಲಾಗುವುದು ಎಂದು ಜಲಾಶಯ ಆಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದ ಕೆಳಭಾಗದ ನದಿ ತೀರದ ಗ್ರಾಮಗಳ ನಿವಾಸಿಗಳು, ರೈತರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದೇ ವೇಳೆ, ಜುಲೈ 18ರಂದು ಬೆಳಿಗ್ಗೆ 8 ಗಂಟೆಯ ವೇಳೆಗೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟ 517.42 ಮೀಟರ್ ದಾಖಲಾಗಿದ್ದು, ಒಟ್ಟು ನೀರಿನ ಸಂಗ್ರಹ 89.800 ಟಿಎಂಸಿ ಹಾಗೂ ಜೀವಂತ ಸಂಗ್ರಹ 72.180 ಟಿಎಂಸಿಯಾಗಿದೆ.

ಜಲಾಶಯಕ್ಕೆ ಸರಾಸರಿ 6,091 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರಸ್ತುತ ಟ್ಯಾಂಕ್ ಭರ್ತಿಗೆ 2,589 ಕ್ಯೂಸೆಕ್ ಹಾಗೂ ಕುಡಿಯುವ ನೀರು, ಆವಿಯಾಗುವಿಕೆ ಮತ್ತು ಬ್ಯಾಕ್‌ವಾಟರ್ ಅಗತ್ಯಗಳಿಗೆ 423 ಕ್ಯೂಸೆಕ್ ಸೇರಿದಂತೆ ಒಟ್ಟು 3,012 ಕ್ಯೂಸೆಕ್ ನೀರು ಬಳಸಲಾಗುತ್ತಿದೆ. ಕೃಷ್ಣಾ ನದಿಗೆ ನೀರು ಬಿಡುಗಡೆ ಆರಂಭಗೊಂಡಿರುವುದರಿಂದ ಮುಂದಿನ ಕೆಲ ಗಂಟೆಗಳಲ್ಲಿ ಹರಿವು ಹೆಚ್ಚಾಗುವ ಸಾಧ್ಯತೆ ಇದ್ದು, ನದಿ ಪಾತ್ರದಲ್ಲಿರುವವರು ಯಾವುದೇ ಕಾರಣಕ್ಕೂ ನೀರಿನ ಸಮೀಪ ತೆರಳದಂತೆ ಹಾಗೂ ಜಾನುವಾರುಗಳನ್ನು ನದಿಗೆ ಇಳಿಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!