Vijaypura

2028ರಲ್ಲಿ ಎಸ್.ಕೆ. ಬೆಳ್ಳುಬ್ಬಿ ಸಚಿವರಾಗಲಿ: ಪುರಿ ಜಗನ್ನಾಥ ಮಹಾರಥೋತ್ಸವದಲ್ಲಿ ಅಭಿಮಾನಿಗಳ ವಿಶೇಷ ಪ್ರಾರ್ಥನೆ

Share

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ ಅವರು 2028ರಲ್ಲಿ ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿ ಎಂದು ಅವರ ಅಭಿಮಾನಿಗಳು ಒಡಿಶಾದ ಪುರಿಯ ಜಗತ್ತಿನ ಅಧಿಪತಿ ಶ್ರೀ ಜಗನ್ನಾಥ ಸ್ವಾಮಿಯ ಮಹಾರಥೋತ್ಸವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವದಲ್ಲಿ ಭಾಗವಹಿಸಿದ ಬೆಳ್ಳುಬ್ಬಿ ಅಭಿಮಾನಿಗಳು, ರಾಜ್ಯದ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ ಎಸ್.ಕೆ. ಬೆಳ್ಳುಬ್ಬಿ ಅವರಿಗೆ ಮತ್ತಷ್ಟು ಅವಕಾಶ ದೊರೆಯಲಿ ಎಂದು ದೇವರಲ್ಲಿ ಬೇಡಿಕೆ ಇಟ್ಟರು. ರಾಜ್ಯ ರಾಜಕಾರಣದಲ್ಲಿ ಅವರಿಗೆ ಮತ್ತೊಮ್ಮೆ ಮಹತ್ವದ ಜವಾಬ್ದಾರಿ ಸಿಗಲಿ ಹಾಗೂ ಸಚಿವರಾಗುವ ಭಾಗ್ಯ ದೊರೆಯಲಿ ಎಂದು ಪ್ರಾರ್ಥಿಸಿದರು. ಜಗನ್ನಾಥ ಮಹಾರಥೋತ್ಸವದಲ್ಲಿ ಭಾಗವಹಿಸಿ ಈ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಸಿದ ಅಭಿಮಾನಿಗಳು, “ಬೆಳ್ಳುಬ್ಬಿ ಸಾಹೇಬರು ಮತ್ತೆ ಸಚಿವರಾಗಿ ಜನಸೇವೆ ಮಾಡುವ ದಿನ ಶೀಘ್ರ ಬರಲಿ” ಎಂದು ಆಶಯ ವ್ಯಕ್ತಪಡಿಸಿದರು.

Tags:

error: Content is protected !!