Dharwad

ಧಾರವಾಡದಲ್ಲಿ 5ವರ್ಷದ ಮಗುವಿನ ಮೂಗಿನಲ್ಲಿ ವಾಚ್ ಸೆಲ್, ಕುಟುಂಬಸ್ಥರ ಆತಂಕ….

Share

ಐದು ವರ್ಷದ ಬಾಲಕನೋರ್ವ ತನ್ನ ಮೂಗಿನಲ್ಲಿ ವಾಚಿನ ಶೆಲ್ ಹಾಕಿಕೊಂಡಿದ್ದನ್ನು ಪರಿಶೀಲಿಸಿದ ವೈದ್ಯರು, ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಹೌದು ….ಧಾರವಾಡದ ಐದು ವರ್ಷದ ಬಾಲಕನೋರ್ವ ತನ್ನ ಮೂಗಿನಲ್ಲಿ ವಾಚಿನ ಶೆಲ್ ಹಾಕಿಕೊಂಡು ಕೆಲ ದಿನ ಕಳೆದಿತ್ತು. ಆನಂತರ ಆ ಬಾಲಕನ ಮೂಗು ನೋವಾಗುತ್ತಿದೆ ಎಂದು ಧಾರವಾಡದ ಖಾಸಗಿ ವೈದ್ಯ ಡಾ.ಅನಿಕೇತ್‌ ಪಾಂಡುರಂಗ ಅವರ ಬಳಿ ಪಾಲಕರು ಮಗುವನ್ನು ಕರೆ ತಂದಿದ್ದರು.

ಈ ವೇಳೆ ಬಾಲಕನ ಮೂಗು ಪರಿಶೀಲಿಸಿದ ವೈದ್ಯರು ಮೂಗಿನಲ್ಲಿ ಏನೋ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ದರು. ಆನಂತರ ಶಸ್ತ್ರ ಚಿಕಿತ್ಸೆ ನಡೆಸಿ ಆ ವಸ್ತುವನ್ನು ಹೊರ ತೆಗೆದಾಗ ಅದು ವಾಚಿನ ಶೆಲ್ ಎಂದು ಗೊತ್ತಾಗಿದೆ. ಬಾಲಕ ತನ್ನ ಬಲಗಡೆ ಮೂಗಿನಲ್ಲಿ ಈ ವಾಚಿನ್ ಶೆಲ್ ಆಟವಾಡುತ್ತ ಹಾಕಿಕೊಂಡಿದ್ದ ಎಂದು ಗೊತ್ತಾಗಿದೆ. ಚಿಕ್ಕ ಮಕ್ಕಳ ಕೈಗೆ ಸಣ್ಣ ಸಣ್ಣ ವಸ್ತುಗಳನ್ನು ಆಟವಾಡಲು ಕೊಡುವ ಮುನ್ನ ಯೋಚಿಸಬೇಕು ಎಂಬುದು ಈ ಘಟನೆಯಿಂದ ಗೊತ್ತಾಗುತ್ತದೆ.

Tags:

error: Content is protected !!