ಕಿಡಗೇಡಿಗಳು ದೇವರ ಮೂರ್ತಿ ಭಗ್ನಗೊಳಿಸುವ ಮೂಲಕ ಗ್ರಾಮವೊಂದರಲ್ಲಿ ಅಶಾಂತಿ ಸೃಷ್ಟಿ ಮಾಡಿರುವ ಘಟನೆ ಧಾರವಾಡದ ಅಂಬ್ಲಿಕೊಪ್ಪದಲ್ಲಿ ಕಳೆದ ಶುಕ್ರವಾರದಂದು ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಇಂದು ಮೂರ್ತಿಗೆ ಹಾನಿ ಮಾಡಿದವರ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಮಂಜುನಾಥ ಮಕ್ಕಳಗೇರಿ ನೇತೃತ್ವದಲ್ಲಿ ಘಟನಾ ಸ್ಥಳದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದರು.

ಧಾರವಾಡ ಜಿಲ್ಲೆಯ ಅಂಬ್ಲಿಕೊಪ್ಪ ಗ್ರಾಮದ ರಾಯಣ್ಣ ವೃತದಲ್ಲಿ ಓಪನ್ ಪ್ರದೇಶದಲ್ಲಿದ್ದ ಶ್ರೀ ಬೀರ ಲಿಂಗೇಶ್ವರ ಮೂರ್ತಿಯನ್ನು ಭಗ್ನಗೊಳಿಸಲಾಗಿದೆ. ಕುರುಬ ಸಮಾಜದ ಆರಾಧ್ಯ ದೇವರಾಗಿರುವ ಶ್ರೀ ಬೀರಲಿಂಗೇಶ್ವರ ಮೂರ್ತಿ ಭಗ್ನ ವಿಚಾರ ಬೆಳಕಿಗೆ ಬರುತ್ತಿದಂತೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಇಂದು ಘಟನಾ ಸ್ಥಳಕ್ಕೆ ಕುರುಬ ಸಮಾಜದ ಮುಖಂಡರು ಹಾಗೂ ಬಿಜೆಪಿ ಮುಖಂಡ ಮಂಜುನಾಥ ಮಕ್ಕಳಗೇರಿಯವರ ಭೇಟಿ ನೀಡಿದರು. ಬಳಿಕ ಮೂರ್ತಿಯ ಬಳಿಯೇ ಪ್ರತಿಭಟನೆ ನಡೆಸಿ ಮೂರ್ತಿಗೆ ಹಾನಿ ಮಾಡಿದವರ ಬಂಧನಕ್ಕೆ ಆಗ್ರಹಿಸಿದರು. ಧಾರವಾಡ ಗ್ರಾಮಿಉಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಿಸ್ಥಿತಿ ಉದ್ವಗ್ನತೆ ಅರೆತ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗ ಘಟನಾ ಸ್ಥಳಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ.
