Dharwad

SIR ಅರ್ಜಿ ನಮೂನೆಗಳನ್ನು ಸಾರ್ವಜನಿಕ ನಿಗದಿತ ಅವಧಿಯೊಳಗೆ ನೀಡಲು ಧಾರವಾಡ ಡಿಸಿ ಸೂಚನೆ.

Share

ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಈಗಾಗಲೇ ಧಾರವಾಡ ಜಿಲ್ಲೆಯಲ್ಲೂ SIR ಅರ್ಜಿ ನಮೂನೆಗಳು ನೀಡುವ ಕೆಲಸ ನಡೆದಿದೆ. ಮತದಾರರು ನಿಗದಿ ಅವಧಿಯೊಳಗೆ ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು BLO ಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್.ಸ್ನೇಹಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 1665 ಮತಗಟ್ಟೆಗಳಿವೆ. ಈಗಾಗಲೇ ಎಲ್ಲ BLO ಗಳು SIR ನಮೂನೆಗಳನ್ನು ನೀಡುತ್ತಿದ್ದಾರೆ. ಶೇ.93.69 ರಷ್ಟು ಅರ್ಜಿಗಳನ್ನು ನೀಡಲಾಗಿದೆ. ಒಟ್ಟು ಜಿಲ್ಲೆಯಲ್ಲಿ 16,21,961 ಮತದಾರರಿದ್ದು, ಈ ಪೈಕಿ 3,33,765 ಜನ ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ವಾಪಸ್ ನೀಡಿದ್ದು, ವಾಪಸ್ ನೀಡಿದ ಅರ್ಜಿಗಳನ್ನು ಡಿಜಿಟಲೈಜೇಷನ್ ಮಾಡಬೇಕಾಗಿದ್ದು, ಶೇ.20.58 ರಷ್ಟು ಡಿಜಿಟಲೈಜೇಷನ್ ಕೂಡ ಆಗಿದೆ. ಇದೇ ತಿಂಗಳು 29 SIR ಅರ್ಜಿ ನಮೂನೆಗಳನ್ನು ವಾಪಸ್ ನೀಡಲು ಕೊನೆಯ ದಿನಾಂಕವಾಗಿದ್ದು, ಎಲ್ಲ ಮತದಾರರು ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ BLO ಗಳಿಗೆ ನೀಡಬೇಕು ಎಂದು ಡಿಸಿ ಸೂಚನೆ ನೀಡಿದರು.

 

Tags:

error: Content is protected !!