ತಾಲ್ಲೂಕಿನ ದೇಸಾಯಿ ಇಂಗಳಿ ಗ್ರಾಮದಲ್ಲಿ ರವಿವಾರ ಜುಲೈ 19 ರಂದು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿಯ ಅನಾವರಣ ಸಮಾರಂಭವು ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಿವಪ್ರೇಮಿಗಳು ಉಪಸ್ಥಿತರಿರಬೇಕಾಗಿ ಮರಾಠ ಸಮಾಜದ ಮುಖಂಡರಾದ ಶಂಕರ ಪವಾರ, ಅನಿಲ ಪಾಟೀಲ ಹಾಗೂ ಅಡ್ವೊಕೇಟ್ ಬಿ. ಆರ್. ಯಾದವ ಅವರು ಕರೆ ನೀಡಿದ್ದಾರೆ.

ಇಂಗಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ, ಛತ್ರಪತಿ ಶಿವಾಜಿ ಮಹಾರಾಜ ಪುತ್ಥಳಿ ಅನಾವರಣ ಸಮಿತಿ ಇಂಗಳಿ ಹಾಗೂ ಚಿಕ್ಕೋಡಿ ತಾಲ್ಲೂಕು ಮರಾಠ ಸಮಾಜ, ಇಂಗಳಿ ಗ್ರಾಮದ ಎಲ್ಲಾ ಜಾತಿ-ಧರ್ಮದ ಮುಖಂಡರು ಹಾಗೂ ಶಿವಪ್ರೇಮಿಗಳ ಸಮ್ಮುಖದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ನಂತರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಮುಂದುವರಿದು ಮಾತನಾಡಿದ ಅವರು, ರವಿವಾರ ದಿನಾಂಕ 19 ಜುಲೈ ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಶಾಸಕರಾದ ಸಂತೋಷ ಲಾಡ್ ಅವರ ಹಸ್ತದಿಂದ ಶಿವ ಪುತ್ಥಳಿಯ ಉದ್ಘಾಟನೆ ನೆರವೇರಲಿದೆ. ಸದರಿ ಕಾರ್ಯಕ್ರಮವು ಶ್ರೀಶೈಲದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಗೋಸಾವಿ ಮಠದ ಶ್ರೀ ಮಂಜುನಾಥ ಮಹಾಸ್ವಾಮೀಜಿ, ಕಣೇರಿ ಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಹಾಗೂ ವಿಜಯಪುರದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಉಪಸ್ಥಿತರಿರಲಿದ್ದಾರೆ.
ಇದೇ ವೇಳೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೆ.ಎಲ್.ಇ ಕಾರ್ಯಾಧ್ಯಕ್ಷ ಪದ್ಮಶ್ರೀ ಪ್ರಭಾಕರ ಕೋರೆ, ನವದೆಹಲಿ ವಿಶೇಷ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗೆಯೇ ಈ ಪುತ್ಥಳಿ ಸ್ಥಾಪನೆಗಾಗಿ ಬಹುಮೂಲ್ಯ ಸಹಕಾರ ನೀಡಿದ ಶಾಸಕ ಗಣೇಶ್ ಹುಕ್ಕೇರಿ ಅವರಿಗೆ ನಾಗರಿಕ ಸನ್ಮಾನ ಮಾಡಲಾಗುವುದು.
ಈ ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ, ಮಾಜಿ ಸಚಿವ ಶ್ರೀಮಂತ ಪಾಟೀಲ, ಅಜಿತ್ ಸಿಂಗ ನಿಂಬಾಳ್ಕರ ದೇಸಾಯಿ ಸರ್ಕಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ, ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷ ಅಮಿತ್ ಕೋರೆ, ಸೌ. ಸುಪ್ರಿಯಾ ಪಾಟೀಲ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿರಲಿದ್ದಾರೆ. ಈ ಸಮಾರಂಭದಲ್ಲಿ ಮಹಾಪ್ರಸಾದದ ವ್ಯವಸ್ಥೆಯನ್ನು ಉದ್ಯಮಿ ರಮೇಶ್ ಪವಾರ ಅವರು ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಶಿವಭಕ್ತರು ಆಗಮಿಸಲಿದ್ದಾರೆ ಎಂದು ತಿಳಿಸಲಾಯಿತು. ಕಾರ್ಯಕ್ರಮಕ್ಕಾಗಿ ಬೇಕಾಗುವ ಭವ್ಯ ಶಾಮಿಯಾನ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಾಳಾಸಾಹೇಬ ಪಾಟೀಲ್, ಅಣ್ಣಾಸಾಹೇಬ ಶಿಂದೆ, ಅಶೋಕ ಅಡಸುಳೆ, ಅಣ್ಣಾಸಾಹೇಬ ಪವಾರ, ನೀಲೇಶ್ ಧಾಬಡೆ, ಸಂಜಯ ಬಾಮಣೆ, ಧನಾಜಿ ಘೋಸರವಾಡೆ, ರಾಜು ಜಾಧವ, ಅಜಿತ್ ಪವಾರ, ಸಂಜಯ ಜಾಧವ್, ಪಿಂಟು ಮಂಗಸುಳೆ, ರಾಜು ಜತ್ರಾಟೆ, ರಾಜು ದೇಸಾಯಿ, ರಾಜು ತನಪುರೆ, ಪಾಂಡುರಂಗ ಮಾನೆ, ಗಣಪತಿ ಧನವಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
