ಉಗಾರ ಲಯನ್ಸ್ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಗಣ್ಯ ವೈದ್ಯರನ್ನು ಸನ್ಮಾನಿಸಲಾಯಿತು.

ಬುಧವಾರ ಸಂಜೆ ಉಗಾರ್ ಖುರ್ದ್ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶೇಡಬಾಳದ ಹಿರಿಯ ಸ್ತ್ರೀರೋಗ ತಜ್ಞ ಡಾ. ಅಶೋಕ್ ಬಿ. ಪಾಟೀಲ್ ಹಾಗೂ ಅಥಣಿಯ ಆಯುರ್ವೇದ ತಜ್ಞ ಡಾ. ಆಸಿಫ್ಅಲಿ ಡೂಂಗಾರಗಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸದಸ್ಯ ಸಿ.ಎ. ಲಯನ್ ಶ್ರೀಕಾಂತ್ ಭಟ್ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಮೋಹನ್ ಕಟಗೇರಿ ವೈದ್ಯರ ದಿನಾಚರಣೆಯ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ವೈದ್ಯಕೀಯ ಸೇವೆಯು ಸಮಾಜಕ್ಕೆ ನೀಡುವ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ ಎಂದು ಹೇಳಿದರು.
ಕ್ಲಬ್ ಕಾರ್ಯದರ್ಶಿ ಡಾಕ್ಟರ್ ಆನಂದ ಕುಂಬಾರ್ ಉಗಾರ ಲಯನ್ಸ್ ಕ್ಲಬ್ನ ಮುಂಬರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಖಜಾಂಚಿ ಲಯನ್ ಪ್ರಕಾಶ್ ಕುಲಕರ್ಣಿ ಅವರು ಆರ್ಥಿಕ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಲಯನ್ ಡಾ. ಸಂಜೀವ್ ಸಬಾಡೆ, ಲಯನ್ ಬಾಳಗೌಡ ಕಾಗೆ, ಲಯನ್ ಶಶಿಕಾಂತ್ ಜೋಶಿ, ಜಗದೀಶ್ ಪಟವರ್ಧನ್, ಭೂಪಾಲ್ ಚೌಗುಲೆ, ಡಾ. ಬಾಬಾಗೌಡ ಪಾಟೀಲ್, ಡಾ. ಸಾಗರ್ ಮಾಳಿ, ಡಾ. ವಿದ್ಯಾಧರ್ ದೇಶಪಾಂಡೆ, ಲಯನ್ ಅಣ್ಣಾಸಾಹೇಬ್ ವ್ಹಾಣ್ಣವರ, ಮಹಾದೇವ ದಾನಣ್ಣವರ ಹಾಗೂ ಲಯನ್ ವಿಲಾಸ್ ಶಿವಣ್ಣವರ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.
ವೈದ್ಯರ ದಿನಾಚರಣೆಯ ಅಂಗವಾಗಿ ಸಮಾಜ ಸೇವೆಯಲ್ಲಿ ವೈದ್ಯರ ಪಾತ್ರವನ್ನು ಸ್ಮರಿಸಿ, ಅವರ ಸೇವೆಯನ್ನು ಗೌರವಿಸುವ ಸಂದೇಶವು ಈ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
