Uncategorized

ರಮೇಶ್ ಜಾರಕಿಹೊಳಿ ‘ಮೌನಂ ಶರಣಂ ಗಚ್ಛಾಮಿ’: ಇನ್ನೂ 2 ತಿಂಗಳು ಸರ್ಕಾರದ ಬಗ್ಗೆ ನೋ ಕಮೆಂಟ್ಸ್!

Share

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ಕುರಿತು ಇನ್ನು ಎರಡು ತಿಂಗಳು ತಾವು ಮೌನವಾಗಿರಲು ನಿರ್ಧರಿಸಿರುವುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ, “ರಾಜ್ಯ ಸರ್ಕಾರದ ವಿರುದ್ಧ ಅಥವಾ ಸದ್ಯದ ರಾಜಕೀಯ ವಿದ್ಯಮಾನಗಳ ಕುರಿತು ನಾನು ಇನ್ನೂ ಎರಡು ತಿಂಗಳವರೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಹೇಳಿದ್ದಾರೆ. ದಾವಣಗೆರೆಯಲ್ಲಿ ಈಗಾಗಲೇ ಮೂರು ತಿಂಗಳು ಕಾಲಾವಕಾಶ ನೀಡುವುದಾಗಿ ಹೇಳಿದ್ದೆ, ಅದರಲ್ಲಿ ಒಂದು ತಿಂಗಳು ಕಳೆದಿದೆ. ಹೀಗಾಗಿ ಇನ್ನೂ ಎರಡು ತಿಂಗಳು ಕಾಯ್ದು, ಆ ಬಳಿಕವಷ್ಟೇ ಮಾತನಾಡುತ್ತೇನೆ ಎಂದರು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ನೆಗಲೆಟ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಇದು ಅವರ ಪಕ್ಷದ ಆಂತರೀಕ ಸಮಸ್ಯೆ ಎಂದು ಹೇಳಿ ಮುನ್ನಡೆದರು.

Tags:

error: Content is protected !!