Uncategorized

*ಬಿದ್ದವರನ್ನು ಮೇಲೆ ಎತ್ತುವುದೇ ಬಸವ ಧರ್ಮ* ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

Share

ಪ್ರಜಾಪ್ರಭುತ್ವ ಸರಕಾರದ ಈ ದೇಶದಲ್ಲಿ ಪ್ರಜಾಪ್ರತಿನಿಧಿಗಳು ಮತ್ತು ಪ್ರಜೆಗಳು ಹೇಗೆ ಬದುಕಬೇಕೆಂದು ಮಾರ್ಗದರ್ಶನ ಮಾಡಿದವರು 12ನೆಯ ಶತಮಾನದ ಬಸವಾದಿ ಶರಣರು. ಸಕಲ ಜೀವಾತ್ಮರಿಗೆ ಲೇಸನೆ ಬಯಸಿ ವರ್ಗಭೇದ, ವರ್ಣಭೇದ, ಲಿಂಗಬೇದ ಹಾಗೂ ಜಾತಿಭೇದಗಳನ್ನು ಮೀರಿನಿಂತು ಅಹಿಂಸಾ ಮಾರ್ಗದಿಂದ ನೊಂದವರ ಕಣ್ಣೀರು ಬಿದ್ದವರನ್ನು ಮೇಲೆತ್ತುವ ಮಾನವೀಯತೆಯ ಕಾರ್ಯ ಮಾಡಿದವರು ಬಸವಾದಿ ಶಿವಶರಣರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಮೈತ್ರಿಯಿಣಿ ಗದಿಗೆಪ್ಪಗೌಡರ ಅಭಿಪ್ರಾಯ ಪಟ್ಟರು.

 

ಅವರು ಇತ್ತೀಚೆಗೆ ಇಲ್ಲಿನ ಶಿವಬಸವ ನಗರದ ಕಾರಂಜಿ ಮಠದಲ್ಲಿ ನಡೆದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು “ಬಸವಾದಿ ಶರಣರು ಕಟ್ಟಿದ ಮಾನವತಾ ಧರ್ಮ” ಎಂಬ ವಿಷಯ ಕುರಿತು ಚಿಂತನ ಪರ ಉಪನ್ಯಾಸ ನೀಡುತ್ತ ಮಾತನಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ ಈ ಜಗತ್ತಿನಲ್ಲಿ ದಯೆ ಇರದ ಧರ್ಮಗಳು ಯಾವವೂ ಇಲ್ಲ. ಎಲ್ಲ ಧರ್ಮಗಳಲ್ಲೂ ದಯಾಗುಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಬಸವ ಧರ್ಮದಲ್ಲಿ ‘ದಯವಿರದ ಧರ್ಮ ಅದಾವುದಯ್ಯ’ ಎಂಬಂತೆ ಧರ್ಮಕ್ಕೆ ದಯಾಗುಣವೇ ಮುಖ್ಯವೆಂದು ತಿಳಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಒಂದು ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವಚನೋತ್ಸವದ ತರಬೇತಿ ನೀಡಿದ ಕೆ.ಎಲ್.ಇ. ಸಂಸ್ಥೆಯ ಸಂಗೀತ ವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸುನಿತಾ ಪಾಟೀಲ, ಸುಜಾತ ಕಲ್ಮೇಶ, ನಯನಾ ಗಿರಿಗೌಡರ ಹಾಗು ಸಹನಾ ಭೋಗಾರ ಇವರನ್ನು ಕಾರಂಜಿ ಮಠದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಸಹಕಾರಿ ಧುರೀಣೆ ಶೈಲಜಾ ಭಿಂಗೆ, ಶ್ರೀರಂಗ ಜೋಷಿ ವಿ.ವಿ. ದೊಡ್ಮನಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಪ್ರಾಧ್ಯಾಪಕರಾದ ಎ.ಕೆ. ಪಾಟೀಲ ಸ್ವಾಗತಿಸಿ ನಿರೂಪಿಸಿದರು. ಕಾರಂಜಿ ಮಠದ ಕುಮಾರೇಶ್ವರ ಸಂಗೀತ ಪಾಠಶಾಲೆಯ ಮಕ್ಕಳು ವಚನ ಪ್ರಾರ್ಥನೆ ಮಾಡಿದರು. ಕೊನೆಗೆ ನ್ಯಾಯವಾದಿ ವಿ.ಕೆ. ಪಾಟೀಲ ವಂದಿಸಿದರು.

Tags:

error: Content is protected !!