Uncategorized

ರೈತರಿಂದ ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ನ್ಯಾಯಾಂಗ ಶಿಕ್ಷೆಗೆ ಗುರಿಯಾಗಿ ತಲೆ ಮರಿಸಿಕೊಂಡ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರೊಟೆಸ್ಟ್….. AIKKMS ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ ಆಕ್ರೋಶ.

Share

ಧಾರವಾಡ ಜಿಲ್ಲೆಯ ರೈತರಿಂದ ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ವಂಚಿಸಿ ಬಳಿಕ ನ್ಯಾಯಾಂಗ ಶಿಕ್ಷೆಗೆ ಗುರಿಯಾಗಿ ತಲೆ ಮರಿಸಿಕೊಂಡಿರುವ ಖರೀದಿದಾರನನ್ನು ಬಂಧಿಸುವಂತೆ ಆಗ್ರಹಿಸಿ ಧಾರವಾಡದಲ್ಲಿ ಅನ್ನದಾತರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.‌

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ AIKKMS ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಹಾಗೂ ರೈತರು ಮೆಕ್ಕೆಜೋಳ ಖರೀದಿಸಿ ವಂಚಿಸಿದ ಆರೋಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ ನಗರ ವಾಸಿ ಖಾಜಮುದ್ದಿನ್ ವ್ಯಕ್ತಿ, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕಿನ ಹಳ್ಳಿಗಳಾದ ಕುರಡಿಕೆರೆ, ಕರಡಿಕೊಪ್ಪ, ಸುರಶೆಟ್ಟಿಕೊಪ್ಪ, ಭೂಮ್ಮಸಮುದ್ರ ಹಳ್ಳಿಗಳ ನೂರಾರು ರೈತರ ಮೆಕ್ಕೆಜೋಳವನ್ನು ಖರೀದಿ ಮಾಡಿದ್ದಾನೆ. ಆದರೆ ಖರೀದಿ ನಂತರ ರೈತರಿಗೆ ಹಣ ನೀಡದೇ ಸತಾಯಿಸಿದ್ದಾನೆ, ಇದರ ಕುರಿತು ರೈತರು ಇತನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಖರೀದಿದಾರನಿಗೆ ಶಿಕ್ಷೆ ಕೂಡಾ ಆಗಿದೆ. ಆದರೆ ಈಗ ಶಿಕ್ಷೆ ಆದರು ಕೂಡಾ ಖರೀದಿದಾರ ತಲೆ ಮರಿಸಿಕೊಂಡಿದ್ದು, ಕಷ್ಟಪಟ್ಟು ಸಾಲಾ ಸೋಲಾ ಮಾಡಿದ ಅನ್ನದಾತರಿಗೆ ಇದೂವರೆಗೂ ಬೆಳೆ ಹಣ ಸಿಕ್ಕಿಲ್ಲ. ಈ ಕೂಡಲೇ ಅಪರಾಧಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ರೈತರಿಗೆ ಆಗುತ್ತಿರುವ ಅನ್ಯಾಯ ಸರಿಡಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

 

Tags:

error: Content is protected !!