ಕೃಷ್ಣಾ ನದಿಯ ಮೇಲ್ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿರುವ ಪರಿಣಾಮ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದ್ದು, ಮಂಗಳವಾರ ಬೆಳಿಗ್ಗೆ 8 ಗಂಟೆಯ ವೇಳೆಗೆ ಜಲಾಶಯಕ್ಕೆ ಸರಾಸರಿ 21,625 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 508.28 ಮೀಟರ್ ದಾಖಲಾಗಿದ್ದು, ಒಟ್ಟು ನೀರಿನ ಸಂಗ್ರಹ 22.460 ಟಿಎಂಸಿ ಹಾಗೂ ಜೀವಂತ ನೀರಿನ ಸಂಗ್ರಹ 4.84 ಟಿಎಂಸಿ ಇದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 123.081 ಟಿಎಂಸಿ (ಆರ್‌ಎಲ್ 519.60 ಮೀ.) ಆಗಿದೆ.
ಜಲಾಶಯದಿಂದ ನೀರಾವರಿ ಹಾಗೂ ಕೆರೆ ತುಂಬಿಸುವ ಉದ್ದೇಶಕ್ಕೆ ಯಾವುದೇ ನೀರನ್ನು ಬಿಡುಗಡೆ ಮಾಡಲಾಗುತ್ತಿಲ್ಲ. ಕೆಪಿಸಿಎಲ್‌ಗೆ ವಿದ್ಯುತ್ ಉತ್ಪಾದನೆಗಾಗಿ 100 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಸ್ಪಿಲ್‌ವೇ ಮೂಲಕ ನೀರು ಹರಿಸಲಾಗುತ್ತಿಲ್ಲ. ಹಿನ್ನೀರು, ಆವಿಯಾಗುವಿಕೆ ಹಾಗೂ ಕುಡಿಯುವ ನೀರಿನ ಅಗತ್ಯಕ್ಕಾಗಿ 445 ಕ್ಯೂಸೆಕ್ ನೀರು ಬಳಕೆಯಾಗುತ್ತಿದೆ.
ಒಟ್ಟಾರೆ ಜಲಾಶಯದಿಂದ 545 ಕ್ಯೂಸೆಕ್ ನೀರು ಹೊರಹರಿಯುತ್ತಿದ್ದು, ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
