ಬೆಳಗಾವಿಯ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ *ಶ್ರೀ ಎಸ್.ಪಿ. ಹಿರೇಮಠ್* ಅವರು, ದೇಶದ ಸುಸ್ಥಿರ ಅಭಿವೃದ್ಧಿಗೆ ಜನಸಂಖ್ಯೆ ನಿಯಂತ್ರಣ ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯರಾದ * ಸಿದ್ದರಾಮೇಶ್ವರ ರೆಡ್ಡಿ, ಉಪ ಪ್ರಾಚಾರ್ಯರಾದ * ಆರ್.ಬಿ. ಮೊತ** ಹಾಗೂ ವೈದ್ಯಾಧಿಕಾರಿಗಳಾದ *ಡಾ. ಜಯವಂತ್* ಮತ್ತು *ಡಾ. ಹೇಮಲತಾ ಎಚ್.* ಉಪಸ್ಥಿತರಿದ್ದು ಮಾಹಿತಿ ನೀಡಿದರು.


ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಲೇಜು ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಯಲ್ಲಿ *ಕು. ನಿವೇದಿತಾ ಗುಡದೂರ್* ಪ್ರಥಮ, *ಕು. ಪೂಜಾ ಕೊಲ್ಯಾರ* ದ್ವಿತೀಯ, *ಕು. ಪ್ರೇಮ್ ನಾಯಕ್* ತೃತೀಯ ಹಾಗೂ *ಕು. ಶಕುಂತಲಾ ಲಮಾಣಿ* ಸಮಾಧಾನಕರ ಬಹುಮಾನ ಪಡೆದರು. ಇನ್ನು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ *ಡಾ. ಸಂಜಯ್ ಸಿದ್ದಣ್ಣವರ್* ಅವರು ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ * ಪ್ರಕಾಶ್ ಜಿ. ಮಾಣೆ* ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆ ನಿರ್ವಹಿಸಿದರೆ, ಮತ್ತೊಬ್ಬ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ * ಶಿವಾಜಿರಾವ್ ಮಾಲಿಗನ್ನವರ* ಬಹುಮಾನ ವಿತರಣೆ ನಡೆಸಿಕೊಟ್ಟರು. * ಪ್ರೊ. ಮುಬಾರಕ್ ಹುಕ್ಕೇರಿಕರ್* ವಂದನಾರ್ಪಣೆ ಸಲ್ಲಿಸಿದ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದರು.
