Khanapur

ಖಾನಾಪೂರ ಬಿಇಒ ಪಿ. ರಾಮಪ್ಪ ನಿವೃತ್ತಿ: ಶಿಕ್ಷಣ ಕ್ಷೇತ್ರದ ಧ್ರುವತಾರೆಗೆ ಭಾವಪೂರ್ಣ ಬೀಳ್ಕೊಡುಗೆ!

Share

ಖಾನಾಪೂರ ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಕೇವಲ 16 ತಿಂಗಳ ಅಲ್ಪಾವಧಿಯಲ್ಲೇ ಕ್ರಾಂತಿಕಾರಕ ಬದಲಾವಣೆ ತಂದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ರಾಮಪ್ಪ ಅವರು ತಮ್ಮ ಸುದೀರ್ಘ 35 ವರ್ಷಗಳ ಶೈಕ್ಷಣಿಕ ಸೇವೆಗೆ ನಿವೃತ್ತಿ ಘೋಷಿಸಿದ್ದಾರೆ.

ಮರಾಠಾ ಮಂಡಳ ಸಭಾಂಗಣದಲ್ಲಿ ನಡೆದ ಭವ್ಯ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಠ್ಠಲ ಹಲಗೇಕರ ಅವರು, ರಾಮಪ್ಪ ಅವರ ಪ್ರಾಮಾಣಿಕತೆ ಹಾಗೂ ವಿದ್ಯಾರ್ಥಿ ಪರ ತಳಮಳವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.ಸಮಾರಂಭದಲ್ಲಿ ಮಾತನಾಡಿದ ಶಾಸಕ ಹಲಗೇಕರ, 70 ವರ್ಷಗಳಿಂದ ಬಾಕಿ ಉಳಿದಿದ್ದ ಔರತಬೆಲ್ ಗ್ರಾಮದ ಶಾಲೆಯನ್ನು ಆರಂಭಿಸಿದ್ದು, ಪಿಎಂ ಶ್ರೀ ಹಾಗೂ ಕೆಪಿಎಸ್ ಶಾಲೆಗಳ ಉನ್ನತೀಕರಣ ಮತ್ತು ಅತಿಥಿ ಶಿಕ್ಷಕರ ಸಮರ್ಪಕ ನೇಮಕಾತಿಯಲ್ಲಿ ಬಿಇಒ ರಾಮಪ್ಪ ಅವರ ಶ್ರಮ ಅನನ್ಯವಾದುದು ಎಂದರು. ತಾಲೂಕು ಈ ಬಾರಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆಯಲು ಹಾಗೂ ವಿದ್ಯಾರ್ಥಿನಿ ದಿವ್ಯಾ ದೇಸಾಯಿ ರಾಜ್ಯಕ್ಕೆ ಪ್ರಥಮ ರ್ಯಾಂಯಕ್ ಬರಲು ರಾಮಪ್ಪ ಅವರ ನಿರಂತರ ಮಾರ್ಗದರ್ಶನವೇ ಕಾರಣ ಎಂದು ಗಣ್ಯರು ಸ್ಮರಿಸಿದರು.

ಇದೇ ವೇಳೆ ಸನ್ಮಾನ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ ಪಿ. ರಾಮಪ್ಪ ಅವರು, “ಜನ್ಮಭೂಮಿಗಿಂತ ಕರ್ಮಭೂಮಿಗೆ ಹೆಚ್ಚಿನ ಮಹತ್ವ ನೀಡಿ, ಕೆಲಸವನ್ನೇ ಪೂಜೆಯೆಂದು ಭಾವಿಸಿ ಸೇವೆ ಸಲ್ಲಿಸಿದ್ದೇನೆ” ಎಂದು ನುಡಿದರು. ಈ ಯಶಸ್ಸಿನ ಶ್ರೇಯಸ್ಸನ್ನು ಅವರು ಸಂಪೂರ್ಣ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಬಿಆರ್‌ಸಿ ಮಂಜುನಾಥ ಹಟ್ಟಿ ಸ್ವಾಗತಿಸಿದರೆ, ಶಂಕರ್ ಕಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ವಿವೇಕ ಕುರಗುಂದ ಕಾರ್ಯಕ್ರಮ ನಿರೂಪಿಸಿದರು.

Tags:

error: Content is protected !!