Vijaypura

ಆಲಮಟ್ಟಿ ಜಲಾಶಯಕ್ಕೆ ಭಾರೀ ಒಳಹರಿವು: 40,559 ಕ್ಯೂಸೆಕ್ ನೀರು, ನೀರಿನ ಮಟ್ಟ 517.63 ಮೀ.ಗೆ ಏರಿಕೆ

Share

ಕೃಷ್ಣಾ ನದಿಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ನೀರಿನ ಒಳಹರಿವು ನಿರಂತರವಾಗಿ ಹೆಚ್ಚುತ್ತಿದ್ದು, ಭಾನುವಾರ (ಜುಲೈ 19) ಬೆಳಿಗ್ಗೆ 8 ಗಂಟೆಯ ವೇಳೆಗೆ ಜಲಾಶಯಕ್ಕೆ 40,559 ಕ್ಯೂಸೆಕ್ ಸರಾಸರಿ ನೀರು ಹರಿದುಬಂದಿದೆ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 517.63 ಮೀಟರ್ ಇದ್ದು, ಒಟ್ಟು ಸಂಗ್ರಹ 92.593 ಟಿಎಂಸಿ ಹಾಗೂ ಜೀವಂತ ನೀರಿನ ಸಂಗ್ರಹ 74.973 ಟಿಎಂಸಿ ದಾಖಲಾಗಿದೆ. ಜಲಾಶಯದಿಂದ ಕೆಪಿಸಿಎಲ್ ಮೂಲಕ 5,250 ಕ್ಯೂಸೆಕ್, ಕೆರೆ ತುಂಬಿಸಲು 2,575 ಕ್ಯೂಸೆಕ್ ಹಾಗೂ ಕುಡಿಯುವ ನೀರು, ಆವಿಯಾಗುವಿಕೆ ಮತ್ತು ಬ್ಯಾಕ್‌ವಾಟರ್‌ಗೆ 408 ಕ್ಯೂಸೆಕ್ ಸೇರಿ ಒಟ್ಟು 8,233 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 123.081 ಟಿಎಂಸಿ (519.60 ಮೀಟರ್) ಆಗಿದ್ದು, ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದರೆ ಒಳಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

Tags:

error: Content is protected !!