ವಿಜಯಪುರ ನಗರ ಸಮೀಪದ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನಸ ಗಂಗೋತ್ರಿ ಶಾಲೆ ಎದುರು ನಿಲ್ಲಿಸಲಾಗಿದ್ದ ತಿಡಗುಂದಿಯ ದೇವದಾಸ್ ಜಾಧವ್ ಅವರಿಗೆ ಸೇರಿದ ಸ್ಕಾರ್ಪಿಯೋ ಕಾರು (ಕೆಎ 29 ಎಂಎ 5444) ಶನಿವಾರ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ಆರಿಸಿದರಾದರೂ ಕಾರು ಸುಟ್ಟು ಭಸ್ಮವಾಗಿದ್ದು, ₹15.36 ಲಕ್ಷ ನಷ್ಠವಾಗಿದೆ.

