ಶಮನೇವಾಡಿಯ ಎ.ಜಿ.ಎಮ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಈಗಾಗಲೇ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ಟಡಿ ಕಿಟ್ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಡಾ. ಡಿ. ಎಚ್. ರಾವ್, ಫಾರ್ಮರ್ ಡಿನ್-ಇಂಜಿನೀಯರಿಂಗ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಮಾತನಾಡಿ –
ಜೀವನದಲ್ಲಿ ಸಮಯಪಾಲನೆ ಹಾಗೂ ಶಿಸ್ತು ಬೆಳೆಸಿಕೊಳ್ಳಬೆಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಾವು ಯಾವ ಕಾಲೇಜಿನಲ್ಲಿ, ಓದುತ್ತೆವೆನ್ನುವುದಕ್ಕಿಂತ ಯಾವ ರೀತಿ ನಮ್ಮನ್ನು ನಾವು ಪರಿಪಕ್ವಗೊಳಿಸಿಕೊಳ್ಳುತ್ತೆವೆಂಬುದು ಮುಖ್ಯ. ನಮ್ಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿರಬೇಕು, ನಮ್ಮನ್ನು ನಾವು ವಿಮರ್ಶಿಸಿಕೊಳ್ಳಬೇಕು.
ಈ ಮೂರರ ಮೇಲೆ ಗಮನವಿರಲಿ-ಮನೋಭಾವನೆ, ಕೌಶಲ್ಯ ಹಾಗೂ ಜ್ಞಾನ. ಇಂಜಿನೀಯರಿಂಗ್‍ನಲ್ಲಿ ಯಾವುದೇ ವಿಭಾಗ ಕೆಟ್ಟದ್ದಲ್ಲ ಅಥವಾ ಒಳ್ಳೆಯದಲ್ಲ ಆದರೆ ನಮ್ಮನ್ನು ನಾವು ಯಾವ ರೀತಿ ವ್ಯಕ್ತಪಡಿಸಿಕೊಳ್ಳುತ್ತೆವೆಂಬುದು ಮುಖ್ಯ. ತಮ್ಮ ವಿಭಾಗದಲ್ಲಿ ಅತ್ಯುನ್ನತ ಜ್ಞಾನವನ್ನು ಪಡೆದುಕೊಳ್ಳುಬೇಕೆಂದು ಹೇಳಿದರು.
ಇಂದು ವಿದ್ಯಾರ್ಥಿಗಳು ಬಹು ಆಯಾಮಗಳಲ್ಲಿ ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ಎಂದಿಗೂ ನಮ್ಮ ಸಮಾಜಕ್ಕೆ, ಶಿಕ್ಷಕರಿಗೆ, ಹಾಗೂ ಪಾಲಕರಿಗೆ ಮೋಸವಾಗದಂತೆ ಕಾಳಜಿ ವಹಿಸಿ ಮುನ್ನಡೆಯಿರಿ ಎಂದರು. ಮನಸ್ಸಿನ ಏಕಾಗ್ರತೆ ಸಾಧಿಸಲೂ ಹಾಗೂ ಸಮಯದ ಸದ್ಬಳಕೆಗೆ ದಿನದ ಎಲ್ಲ ಚಟುವಟಿಕೆಗಳನ್ನು ಮಲಗುವ ಮುಂಚೆ ಮೇಲುಕು ಹಾಕಿ ನಾಳಿನ ಯೋಜನೆ ಮಾಡಿಕೊಳ್ಳಿ ಎಂದರು. ದೊಡ್ಡ ಕನಸುಗಳನ್ನು ಕಾಣಿರಿ, ಹಾಗೂ ಅವುಗಳನ್ನು ಪಡೆದೇ ತಿರುತ್ತೇನೆಂಬ ಆತ್ಮವಿಶ್ವಾಸವಿರಲಿ. ಒಳ್ಳೆಯ ಹವ್ಯಾಸಗಳನ್ನು ವರ್ತಮಾನದಲ್ಲಿ ಕಾರ್ಯಗತಗೊಳಿಸಿಕೊಂಡರೇ ಮಾತ್ರ ಯಶಸ್ವಿಯಾಗಲೂ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ರಾಷ್ಟ್ರಸಂತ ಆಚಾರ್ಯಶ್ರೀ 108 ಗುಣಧರನಂದಿ ಮಹಾರಾಜರು–
ಬಡ ವರ್ಗದ ಕುಟುಂಬದ ಸಮಸ್ಯೆಗಳು ನೂರಾರು. ಗಡಿಭಾಗದ ಬಡ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ಸಿಗಬೇಕೆಂಬ ಉದ್ಧೇಶದಿಂದ ಈ ಶೈಕ್ಷಣಿಕ ಸಾಲಿನಿಂದ (2026-27) ಎ.ಜಿ.ಎಮ್. ಇಂಜಿನಿಯರಿಂಗ್ ಕಾಲೇಜನ್ನ ಆರಂಭಿಸಲಾಗಿದೆ ಎಂದರು. ಮಹಾವಿದ್ಯಾಲಯದಲ್ಲಿ 10 ವರ್ಷಕ್ಕೂ ಹೆಚ್ಚು ಅನುಭವ ಹೊಂದಿದ ಪ್ರಾಧ್ಯಾಪಕರಿಂದ, ಐಐಟಿ / ಐಐಐಟಿ ಪ್ರಾಧ್ಯಾಪಕರಿಂದ, ಕಂಪನಿಗಳ ಕಾರ್ಯನಿರ್ವಾಹಣಾಧಿಕಾರಿಗಳಿಂದ ಮಾರ್ಗದರ್ಶನ, ತರಬೇತಿ ಮತ್ತು ನೇಮಕಾತಿ ಘಟಕದ ವತಿಯಿಂದ ಪ್ರಥಮ ವರ್ಷದಿಂದ ಪ್ಲೆಸಮೆಂಟ್ ಟ್ರೆನಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ವಿಶ್ವವಿದ್ಯಾಲಯಕ್ಕೆ ರ್ಯಾಂಕ್ ಹಾಗೂ ಯುನಿವರ್ಸಿಟಿ ಬ್ಲಿವ್ ವಿದ್ಯಾರ್ಥಿಗಳಿಗೆ ಉಚಿತ ವಿಮಾನಯಾಣ, ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗೆ ಲ್ಯಾಪಟಾಪ್, ದ್ವೀತಿಯ ಸ್ಥಾನ ಗಳಿಸಿದವರಿಗೆ ಟ್ಯಾಬ್ಲೆಟ್ ವಿತರಿಸಲಾಗುವುದು ಎಂದರು.
ನಿಮ್ಮ ಶರೀರ ಅಮೂಲ್ಯ. ಅದನ್ನು ಆರೋಗ್ಯವಾಗಿಟ್ಟುಕೊಳ್ಳಿ. ಬುದ್ಧಿ ಬೆಳೆಸುವಂತ ಆಹಾರ ಸೇವನೆ ಮಾಡಿ. ನೀವೆನಾದು ಇಂದು ಈ ಜಗತ್ತಿನಲ್ಲಿ ಇದ್ದಿರೆಂದರೇ ಅದಕ್ಕೆ ನಿಮ್ಮ ತಂದೆ-ತಾಯಿಗಳೇ ಕಾರಣ ಅವರನ್ನ ಆದರದಿಂದ ನೋಡಿಕೊಳ್ಳಿ ಎಂದರು. ಇಂಜೀನಿಯರಿಂಗ್ ವಿದ್ಯಾರ್ಥಿಗಳು ಕೇವಲ ನೌಕರಿಯ ಬೆನ್ನತ್ತದೇ, ತಾವೇ ಉದ್ಯೋಗ ಸೃಷ್ಟಿಸುವಂತಾಗಬೇಕು ಎಂದರು. ಉತ್ತರ ಕರ್ನಾಟಕದ ಯಾವುದೇ ಕಾಲೇಜಿನಲ್ಲಿರುವುದಕ್ಕಿಂತ ವಿಶೇಷ ವ್ಯವಸ್ಥೆ ಇಲ್ಲಿ ನೀಡಲಾಗುವುದು ಎಂದರು. ಕಂಪನಿಗಳು ನಿಮ್ಮನ್ನು ಹುಡುಕಿ ಬರುವಂತೆ ತಾವು ತಯಾರಿ ಮಾಡಿಕೊಳ್ಳಿ. ಯುವಪಿಳಿಗೆ ಚಟಕ್ಕೆ ದಾಸರಾಗಬೇಡಿ ಎಂದರು.
ಈಗಾಗಲೇ ಪ್ರವೇಶಾತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಸ್ಟಡಿ ಕಿಟ್ – ಕಾಲೇಜ ಬ್ಯಾಗ್, ಬುಕ್ಸ್, ಪೆನ್, ಸೈಂಟಿಫಿಕ್ ಕ್ಯಾಲಕ್ಯುಲೆಟರ್, ವಾಟರ್ ಬಾಟಲ್ ವಿತರಿಸಿದರು.
ಪ್ರಥಮ ವರ್ಷದ ಸಂಯೋಜಕರಾದ ಡಾ. ಸಚೀನ ಮೆಕ್ಕಳಕಿ 2026-27 ಸಾಲಿನ ಶೈಕ್ಷಣಿಕ ಯೋಜನೆ ಕುರಿತು ಮಾತನಾಡಿದರು.
ಡಾ. ಸಂಜಯ ಅಂಕಲಿ ಮಹಾವಿದ್ಯಾಲಯದಲ್ಲಿನ ಉದ್ಯೋಗಾವಕಾಶ ಹಾಗೂ ತರಬೇತಿ ಘಟಕದ 4 ವರ್ಷಗಳ ಯೋಜನೆ ವಿವರಿಸಿದರು.
ಸಂಚಾಲಕಿ ಭಾಗ್ಯಶ್ರೀ ಅಲಗುರೆ ಸ್ವಾಗತಿಸಿದರು.
ಸಾನ್ವಿ ಕೋಳಿ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು.
ಪ್ರಾಧ್ಯಾಪಕ ವೈಶ್ಣವ ಶೆಗಳೆ ಅಥಿತಿ ಪರಿಚಯಿಸಿದರು.
ಪ್ರಾಧ್ಯಾಪಕಿ ಅಶ್ವಿನಿ ಫರಲಾದ ಹಾಗೂ ಸ್ನೇಹಾ ವಾಳಕಿ ನಿರೂಪಿಸಿದರು.
ಪ್ರಾಧ್ಯಾಪಕ ಅಭಿಜಿತ ಅಕಿವಾಟೆ ವಂದಿಸಿದರು.
ಡಾ. ಶಶಿಕಾಂತ ವಾಳಕೆ, ಶ್ರೀ. ಕೆ ಆರ್ ಪಾಟೀಲ, ಶ್ರೀಮತಿ. ಅಶ್ವಿನಿ ಮೊನಾಚಾರ್ಯ, ಶ್ರೀಮತಿ. ರಾಣಿ ಸುಟುರೆ, ಶ್ರೀ. ರವಿ ವಾಳಕೆ, ಪಿರಗೌಡಾ ಹುಳಿಕೊಪ್ಪೆ, ಸ್ವಯಂ ಸಂದೀಪ ಶಾಮ್, ಅರುಣಾ ಮಾಳಗೆ, ಕಾಡೆಶ ಕಲಾದಗಿ, ಮಾಧುರಿ ಬೊರಗಾಂವೆ, ಪ್ರತಿಭಾ ಖೋತ, ಹಾಗೂ ಕಾಲೇಜಿನ ಭೋದಕ-ಭೊದಕೇತರ ಸಿಬ್ಬಂದಿವರ್ಗ, 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು-ಪಾಲಕರು ಉಪಸ್ಥಿತರಿದ್ದರು.
